ಚಿಕ್ಕಬಳ್ಳಾಪುರ: ನಗರದ ಬಿ ಬಿ ರಸ್ತೆಯಲ್ಲಿನ ಎ ಯು ಜ್ಯುವೆಲರ್ಸ್ ನಲ್ಲಿ ಬೆಳ್ಳಿ ಆಭರಣ ದರೋಡೆ ಮಾಡಿ ರಾಜಸ್ಥಾನದ ಅಜ್ಮಿರ್ ನಲ್ಲಿ ಅಡಗಿದ್ದ ದರೋಡೆಕೋರರಿಬ್ಬರನ್ನ ಬಂಧಿಸಿರುವ ಪೊಲೀಸರು ಇಂದು ಎಯು ಜ್ಯುವೆಲರಿ ಅಂಗಡಿಗೆ ಆರೋಪಿಗಳನ್ನು ಕರೆ ತಂದು ಸ್ಥಳ ಮಹಜರು ನಡೆಸಿದರು. ಒಟ್ಟು ಮೂರು ಜನ ಕಳ್ಳರ ಪೈಕಿ ಇಬ್ಬರನ್ನ ಪೋಲೀಸರು ಬಂಧಿಸಿದ್ದು, ಮತ್ತೊಬ್ಬನ ಬಂಧನಕ್ಕೆ ಬಲೆ ಬೀಸಿದ್ದಾರೆ
ಕಳೆದ ಡಿಸೆಂಬರ್ 23 ರಂದು ಚಿಕ್ಕಬಳ್ಳಾಪುರ ಮುಖ್ಯ ರಸ್ತೆಯಾದ ಬಿ.ಬಿ. ರಸ್ತೆಯಲ್ಲಿನ ಎಯು ಜ್ಯುವೆಲರಿಯಲ್ಲಿ ದರೋಡೆ ಮಾಡಿದ್ದ ಬೆಳ್ಳಿ ಆಭರಣ ಕಳ್ಳರನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 78 ಕೆ ಜಿ ಬೆಳ್ಳಿ ಆಭರಣಗಳನ್ನ ಕಳವು ಮಾಡಿದ್ದ ಖತರ್ನಾಕ್ ಕಳ್ಳರನ್ನು ರಾಜಸ್ತಾನದ ಅಜ್ಮೀರದಲ್ಲಿ ಹಿಡಿದಿದ್ದು ಮೂವರ ಪೈಕಿ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಮತ್ತೊಬ್ಬನ ಬಂದನಕ್ಕೆ ಬಲೆ ಬೀಸಿದ್ದಾರೆ.
ಬಂಧಿತ ಪ್ರಮುಖ ಆರೋಪಿ ಹನುಮಂತಸಿಂಗ್ ಹಾಗೂ ರಾಜು ಎಂದು ಗುರ್ತಿಸಲಾಗಿದೆ. ಬಂಧಿತರಿಂದ 21 ಕೆ.ಜಿ ಬೆಳ್ಳಿ ಜಪ್ತಿ ಮಾಡಲಾಗಿದೆ. ಒಟ್ಟು 78 ಕೆಜಿ ಬೆಳ್ಳಿ ಕಳ್ಳತನವಾಗಿತ್ತು. ಬಂಧಿತರು ದಾವಣಗೆರೆಯ ಬಸವೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಬಂಗಾರ ಅಂಗಡಿ ಕಳ್ಳತನ ಮಾಡಿದ್ರು ಎನ್ನಲಾಗಿದೆ. ಬಂದಿಸಿದ ಕಳ್ಳರನ್ನು ಇಂದು ಎ ಯು ಜ್ಯುವೆಲರ್ಸ್ ನಲ್ಲಿ ಬಳಿಗೆ ಮಹಾಜರ್ ಗಾಗಿ ಕರೆ ತರಲಾಗಿತ್ತು
