ಚಿಕ್ಕಬಳ್ಳಾಪುರ: ಕೊಯಮತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದಲ್ಲಿ ಸೋಮವಾರ ಡಿಸೆಂಬರ್ ೧ ರಂದು ಬೆಳಗ್ಗೆ ನಡೆದ ಖಾಸಗಿ ಸಮಾರಂಭದಲ್ಲಿ ಬಹುಭಾಷ ನಟಿ ಸಮಂತಾ ರುತ್ ಪ್ರಭು ಅವರು ಚಲನಚಿತ್ರ ನಿರ್ದೇಶಕ , ನಿರ್ಮಾಪಕ ರಾಜ್ ನಿಡಿಮೋರ್ ಅವರನ್ನು ವಿವಾಹವಾಗಿದ್ದಾರೆ.

ವಿವಾಹ ಕಾರ್ಯಕ್ರಮದ ಚಿತ್ರಗಳನ್ನು ನಟಿ ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊAಡಿದ್ದಾರೆ. ಇಶಾ ಕೇಂದ್ರದ ಒಳಗೆ ಲಿಂಗ ಬೈರವಿ ದೇವಾಲಯದಲ್ಲಿ ನಡೆದ ಈ ವಿವಾಹದಲ್ಲಿ ಅಪ್ತ ಸ್ನೇಹಿತರು ಮತ್ತು ಕುಟುಂಬ ವರ್ಗದವರು ಭಾಗವಹಿಸಿದ್ದರು.
೩೮ ಹರೆಯದ ಸಮಂತಾ ಕೆಂಪು ಸೀರೆ ಧರಿಸಿ ಕೂದಲನ್ನು ಅಚ್ಚುಕಟ್ಟಾಗಿ ಕಟ್ಟಿ, ವಜ್ರದ ಆಭರಣಗಳನ್ನು ಅಲಂಕರಿಸಿಕೊAಡು ಕಂಗೊಳಿಸಿದ್ದು, ರಾಜ್ ನಿಧಿಮೋರು ಬಿಳಿ ಕುರ್ತಾ, ಪೈಜಾಮ ಮತ್ತು ಕ್ರೀಮ್ ಬಂಧ್‌ಗಲಾ ಧರಿಸಿದ್ದರು. ಇಬ್ಬರು ಲಿಂಗ ಬೈರವಿ ದೇವಿಯ ಅವಾಸಸ್ಥಾನದಲ್ಲಿ ಭೂತ ಶುದ್ದಿ ವಿವಾಹ ಸಮಾರಂಭವನ್ನು ನಡೆಸಿದ್ದು, ಲಿಂಗ ಭೈರವಿ ನಿವಾಸಗಳಲ್ಲಿ ಅಥವಾ ಆಯಾ ಸ್ಥಳಗಳಲ್ಲಿ ನೀಡಲಾಗುವ ಭೂತ ಶುದ್ದಿ ವಿವಾಹ ಪದ್ದತಿ ದಂಪತಿಗಳೊಳಗಿನ ಐದು ಅಂಶಗಳನ್ನು ಶುದ್ದಿಕರಿಸುತ್ತದೆ. ಶಾಸ್ತçದಲ್ಲಿ ಜಂಟಿ ಜೀವನ ಪ್ರಯಾಣದಲ್ಲಿ ಸಾಮರಸ್ಯ, ಸಮೃದ್ಧಿ ಮತ್ತು ಆಧ್ಯಾತ್ಮಿಕ ಹೊಂದಾಣಿಕೆಗಾಗಿ ದೇವಿಯ ಅನುಗ್ರಹಕ್ಕಾಗಿ ಧಾರ್ಮಿಕ ವಿಧಿವಿಧಾನಗಳ ಮೂಲಕ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಸಮಂತಾ ಅವರು ೨೦೧೭ ರಲ್ಲಿ ತೆಲುಗು ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು. ೨೦೨೧ ರಲ್ಲಿ ವಿಚ್ಚೇಧನ ಪÀಡೆದುಕೊಂಡಿದ್ದರು. ನಾಗ ಚೈತನ್ಯ ಅವರು ೨೦೨೪ ರಲ್ಲಿ ನಟಿ ಶೋಭಿತ ಧೂಳಿಪಾಲ ಅವರನ್ನು ಎರಡನೇ ವಿವಾಹವಾಗಿದ್ದಾರೆ. ಅವರು ವಿವಾಹವಾಗುವ ವರ್ಷ ತುಂಬುವ ಮೊದಲೇ ಸಮಂತಾ ಅವರು ವಿವಾಹವಾಗುವ ಮೂಲಕ ಗಮನ ಸೆಳೆದಿದ್ದಾರೆ.
Trending
- ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು ; ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಅವಾಚ್ಯ ಶಬ್ದ ಬಳಸಿ ಧಮಕಿ
- ಚಿಕ್ಕಬಳ್ಳಾಪುರದ ಎಯು ಜ್ಯುವೆಲರ್ಸ್ ಕಳ್ಳತನ ಪ್ರಕರಣ ಆರೋಪಿಗಳ ಬಂಧನ, 21 ಕೆಜಿ ಬೆಳ್ಳಿ ವಶ
- ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವೆ : ಶಾಸಕ ಬಿ.ಎನ್.ರವಿಕುಮಾರ್
- ಚಿಮುಲ್ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ : ಕಾಂಗ್ರೆಸ್ ಮುಖಂಡ ರಾಜೀವ್‍ಗೌಡ ಹಾಗು ಆಂಜಿನಪ್ಪ (ಪುಟ್ಟು)
- ಕಲ್ಯಾಣಿ ತ್ಯಾಜ್ಯವನ್ನು ತೆರವುಗೊಳಿಸಲು ನಾಗರೀಕರ ಒತ್ತಾಯ
- ಪಂಚಾಯಿತಿಗೊಂದು ಗುಣಮಟ್ಟದ ಶಾಲೆ ನಿರ್ಮಾಣಕ್ಕೆ ಆದ್ಯತೆ
- ಸ್ವಾಮೀಜಿ ಮೇಲೆ ಹಲ್ಲೆ, ಗಾಯಗೊಂಡ ಸ್ವಾಮೀಜಿ ಆಸ್ಪತ್ರೆಗೆ ದಾಖಲು
