ವಿಜಯಪುರ (ಓಂಕಾರೇಶ್ವರ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವದೇವನಹಳ್ಳಿ): ಪಟ್ಟಣದ ಗುರುಪ್ಪನಮಠದ ಓಂಕಾರೇಶ್ವರ ವೃತ್ತದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಕರ‍್ಯಕ್ರಮವನ್ನು ಆಯೋಜಿಸಲಾಗಿತ್ತು.
ತಾಯಿ ಭುವನೇಶ್ವರಿ ಮತ್ತು ಓಂಕಾರೇಶ್ವರಸ್ವಾಮಿ ದೇವರ ಭಾವಚಿತ್ರಕ್ಕೆ ಹಾಗೂ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಬಳಿಕ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಸರ‍್ವಜನಿಕರಿಗೆ ಅನ್ನಸಂರ‍್ಪಣೆ ನಡೆಯಿತು.
ಕನ್ನಡ ರಾಜ್ಯೋತ್ಸವವು ಕೇವಲ ಒಂದು ದಿನ ಆಚರಣೆಗಷ್ಟೇ ಸೀಮಿತವಾಗಬಾರದು. ಕನ್ನಡ ನಾಡು, ನುಡಿ, ಕಲೆ ಹಾಗೂ ಸಂಸ್ಕೃತಿಗೆ ಕೊಡುಗೆ ನೀಡಿದವರನ್ನು ಸ್ಮರಿಸುವ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದು ಪುರಸಭೆ ಸದಸ್ಯ ಬೈರೇಗೌಡ ತಿಳಿಸಿದರು.
ಕನ್ನಡ ಭಾಷೆ ನಮ್ಮೆಲ್ಲರ ಹೆಮ್ಮೆ. ಪ್ರತಿಯೊಬ್ಬರು ಮಾತೃಭಾಷೆ ಕನ್ನಡ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ನಮ್ಮ ಸಾಹಿತ್ಯ, ಕಲೆ, ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಶ್ರೀನೀಲಗಿರೀಶ್ವರ ವಿದ್ಯಾನಿಕೇತನ ಟ್ರಸ್ಟ್ ಅಧ್ಯಕ್ಷ ವೀರಣ್ಣ ಹೇಳಿದರು.
ಈ ಸಂರ‍್ಭದಲ್ಲಿ ಪುರಸಭೆ ಸದಸ್ಯರಾದ ನಾರಾಯಣಸ್ವಾಮಿ, ರವಿ, ಓಂಕಾರೇಶ್ವರ ಟ್ರಸ್ಟ್ ಅಧ್ಯಕ್ಷ ವಿ.ಎಂ.ನಾಗರಾಜ್, ರಾಮಚಂದ್ರಪ್ಪ, ರಮೇಶ್, ಮಹೇಶ್, ಮಂಜುನಾಥ್, ನವೀನ್, ಅನಿಲ್, ಹರೀಶ್, ಕಿರಣ್, ರಾಜಕುಮಾರ್, ಪ್ರಭಾಕರ್, ಹರೀಂದ್ರ ಮತ್ತಿತರರು ಇದ್ದರು.
