ಚಿಕ್ಕಬಳ್ಳಾಪುರ : ವ್ಯಕ್ತಿಯ ಸಮಗ್ರ ವಿಕಸನಕ್ಕೆ ಕ್ರೀಡೆಗಳು ಹೆಚ್ಚು ಕಾರಣವಾಗಿವೆ. ನಿರಂತರವಾಗಿ ಕ್ರೀಡಾ ಕೂಟ ಗಳನ್ನು ನಡೆಸುವುದರಿಂದ ಪರಸ್ಪರ ಬಾಂಧವ್ಯ ಸಹ ವೃದ್ಧಿಯಾಗುತ್ತದೆ ಗ್ರಾಮೀಣ ಸೊಗಡಿನ ಇಂತಹ ಪ್ರಾಚೀನಹಳ್ಳಿ ಆಟಗಳನ್ನು ಮತ್ತೆ ಬೆಳಕಿಗೆ ತರುವುದು ಅಗತ್ಯವಾಗಿದೆ ಎಂದು ಸೆಂಟ್ರಲ್ ಇಂಗ್ಲಿಷ್ ಸ್ಕೂಲ್ ಕಾರ್ಯಾಧ್ಯಕ್ಷ ಡಿ. ಎನ್. ಉಮೇಶ್ ತಿಳಿಸಿದರು.
ತಾಲೂಕಿನ ದಿಬ್ಬೂರಿನ ನ್ಯೂ ಸೆಂಟ್ರಲ್ ಇಂಗ್ಲಿಷ್ ಸ್ಕೂಲ್ಆ ವರಣದಲ್ಲಿ ಎಂ ಎಂ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಪೋಷಕರ ಕ್ರೀಡಾ ಕೂಟಕ್ಕೆ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು
ದೈಹಿಕ, ಮಾನಸಿಕ ಸದೃಢತೆಯನ್ನು ವೃದ್ಧಿಸುವ ಗ್ರಾಮೀಣ ಕ್ರೀಡೆಗಳನ್ನು ಹೆಚ್ಚು ಪ್ರೋತ್ಸಾಹಿಸಬೇಕು ಇದಕ್ಕೆ ಪೂರಕವಾಗಿ ಪೋಷಕರು ಹೆಚ್ಚು ಆಸಕ್ತಿಯಿಂದ ಭಾಗವಹಿಸಿರುವುದು ಶ್ಲಾಘನೀಯ ಮಕ್ಕಳ ಕಲಿಕೆಗೆ ಶಾಲೆಯಲ್ಲಿ ಆಯೋಜಿಸುವ ಎಲ್ಲಾ ಚಟುವಟಿಕೆಗಳಲ್ಲಿ ಪೋಷಕರು ಭಾಗವಹಿಸುವುದು ಪೂರಕ ವಾತಾವರಣ ಕಲ್ಪಿಸಲಿದೆ ಎಂದರು .
ಸಾಹಿತಿ ಹಿರಿಯ ಪತ್ರಕರ್ತ ಟಿ ಎಸ್. ನಾಗೇಂದ್ರಬಾಬು ಮಾತನಾಡಿ, ಪೋಷಕರ ಕ್ರೀಡಾಕೂಟ ಆಯೋಜಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಎಂ ಕೃಷ್ಣಪ್ಪ ಮಾತನಾಡಿ, ಶಾಲೆಯಲ್ಲಿ ಮಕ್ಕಳ ಹಾಗೂ ಪೋಷಕರ ನಡುವಿನ ಭಾಂದವ್ಯ ಇನ್ನೂ ಗಟ್ಟಿ ಮಾಡಲು ಮಕ್ಕಳ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನ ಹಾಗೂ ನಾಡ ರಾಷ್ಟ್ರೀಯ ಹಬ್ಬಗಳು ಸೇರಿ ಸಾಮರಸ್ಯದ ಬಾಂಧ್ಯವ್ಯವನ್ನ ಬೆಸೆಯುವ ಹಿನ್ನೆಲೆಯಲ್ಲಿ ವಿವಿಧ ಧರ್ಮಗಳ ಹಬ್ಬ ಆಚರಣೆಗಳನ್ನು ಸಹ ಮಾಡಲಾಗುತ್ತಿದೆ ಎಂದರು.
ಸಂಸ್ಥೆಯ ಚೇರ್ಮನ್ ಕೆ ಮಂಜುಳಾ ಮುರಳಿಧರ್ , ಶಾಲಾ ಶಿಕ್ಷಕ ವೃಂದದವರಾದ ಸಿ.ಕೆ.ಪ್ರಜ್ವಲ್, ಲಹರಿ, ಅಕ್ಷಯ, ಅಖಿಲ, ಭೂಮಿಕಾ, ಚೈತ್ರ, ಗಾಯತ್ರಿ ಸೇರಿದಂತೆ ಭೋದಕೇತರ ಸಿಬ್ಬಂದಿ ಇದ್ದರು.
