ಚಿಕ್ಕಬಳ್ಳಾಪುರ: ನಗರದ ಕೃಷ್ಣ ಟಾಕೀಸ್ ರಸ್ತೆಯಲ್ಲಿನ ಪ್ರಜಾಪಿತ ಬ್ರಹ್ಮ ಕುಮಾರಿಸ್ ಈಶ್ವರೀಯ ವಿಶ್ವವಿದ್ಯಾಲಯದ
ಶಿವ ಪ್ರೇರಣಾ ಭವನದಲ್ಲಿ ಸರಳ ಹಾಗೂ ಶಾಂತಿಯುತವಾಗಿ ಹೊಸ ವರ್ಷಾಚರಣೆ ಮಾಡಲಾಯಿತು.
ಸ್ಥಾನಿಕ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಲಲಿತ ಅಕ್ಕ ಅವರು ಸರಳ ಧ್ಯಾನ ಮಾಡಿಸುವ ಮೂಲಕ ಭಗವಂತನ ನೆನಪಿನಲ್ಲಿ ಹೊಸ ವರ್ಷದಲ್ಲಿ ವರ್ಷ ವಿಡೀ ಶಾಂತಿ ನೆಮ್ಮದಿಯನ್ನು ಕಾಪಾಡಿಕೊಂಡು ನೆಮ್ಮದಿಯ ಜೀವನ ಕಂಡು ಕೊಳ್ಳಬೇಕೆಂದರು.
ಬ್ರಹ್ಮಾಕುಮಾರಿಸ್ ನ ಈ ಕೇಂದ್ರದಲ್ಲಿ ಹೊಸ ವರ್ಷವನ್ನು ಗದ್ದಲದ ಪಾರ್ಟಿಗಳ ಬದಲು, ಆಧ್ಯಾತ್ಮಿಕತೆ ಮತ್ತು ಆತ್ಮ-ಪರಿವರ್ತನೆಯ ಮೇಲೆ ಗಮನ ಹರಿಸುತ್ತಾ ಹೊಸ ವರ್ಷದ ಆರಂಭವನ್ನು ಶಾಂತಿಯುತ ಧ್ಯಾನ, ಸಕಾರಾತ್ಮಕ ಸಂಕಲ್ಪಗಳೊಂದಿಗೆ ಆತ್ಮ-ಪರಿಷ್ಕರಣೆ ಮತ್ತು ದೈವಿಕ ಜ್ಞಾನದ ಮೂಲಕ ಆಚರಿಸಲಾಗುತ್ತದೆ ಇಂತಹ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಆತ್ಮದ ಪರಿಶುದ್ಧತೆ ಮಾಡಿಕೊಳ್ಳಬೇಕು ಎಂದರು.
ಜನವರಿ 1 ರಂದು ಹೊಸ ಕ್ಯಾಲೆಂಡರ್ ವರ್ಷವನ್ನು ಸ್ವಾಗತಿಸುವ ಈ ಸಂದರ್ಭದಲ್ಲಿ ಬ್ರಹ್ಮಕುಮಾರಿಗಳು ತಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲು ನಿರ್ಧರಿಸುತ್ತಾರೆ. ಹೊಸ ವರ್ಷದ ಮುನ್ನಾ ದಿನದ ರಾತ್ರಿ ಅಥವಾ ಜನವರಿ 1 ರಂದು ವಿಶೇಷ ಆಧ್ಯಾತ್ಮಿಕ ಸಭೆಗಳನ್ನು ಆಯೋಜಿಸಿ ಆತ್ಮಿಕ ಸಹೋದರ ಸಹೋದರಿಯರಿಗೆ
ಹೊಸ ವರ್ಷದ ಆರಂಭದಲ್ಲಿ ಶಾಂತಿಯುತ ಧ್ಯಾನ ಮಾಡಿಸಿದರು. ಇದರಿಂದ ಜೀವನದಲ್ಲಿ ಉತ್ತಮ ಬದಲಾವಣೆಗಳನ್ನು ತರಲು ಮತ್ತು ಆಧ್ಯಾತ್ಮಿಕವಾಗಿ ಬೆಳೆಯಲು ಸಂಕಲ್ಪಗಳನ್ನು ಕೈಗೊಳ್ಳಬಹುದು ಎಂಬ ಹಿಂಗಿತ ವ್ಯಕ್ತಪಡಿಸಿ ಬ್ರಹ್ಮಕುಮಾರಿಗಳ ತತ್ವಗಳ ಬಗ್ಗೆ ಹೊಸ ಜ್ಞಾನವನ್ನು ಹಂಚಿಕೊಂಡರು.
ಇಲ್ಲಿನ ಬ್ರಹ್ಮಕುಮಾರಿಗಳು ಹೊಸ ವರ್ಷದ ಆಚರಣೆಯು ಬಾಹ್ಯ ಆಡಂಬರಕ್ಕಿಂತ ಅಂತರಿಕ ಪರಿವರ್ತನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರು.
ಈ ಸಂದರ್ಭದಲ್ಲಿ ಸಹೋದರ ಸಹೋದರಿಯರಾದ ಸುಜಾತಕ್ಕ, ಚಿನ್ನಮ್ಮಕ್ಕ, ಗೀತಕ್ಕ ಮಂಜುನಾಥ್ ರೇಣುಕಾ ಅಕ್ಕ, ಶಾಂತ ಕುಮಾರ್ ಸೇರಿದಂತೆ ಇನ್ನಿತರ ಬ್ರಹ್ಮಾಕುಮಾರೀಸ್ ಸಹೋದರ ಸಹೋದರಿಯರು ಇದ್ದರು.
Trending
- ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು ; ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಅವಾಚ್ಯ ಶಬ್ದ ಬಳಸಿ ಧಮಕಿ
- ಚಿಕ್ಕಬಳ್ಳಾಪುರದ ಎಯು ಜ್ಯುವೆಲರ್ಸ್ ಕಳ್ಳತನ ಪ್ರಕರಣ ಆರೋಪಿಗಳ ಬಂಧನ, 21 ಕೆಜಿ ಬೆಳ್ಳಿ ವಶ
- ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವೆ : ಶಾಸಕ ಬಿ.ಎನ್.ರವಿಕುಮಾರ್
- ಚಿಮುಲ್ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ : ಕಾಂಗ್ರೆಸ್ ಮುಖಂಡ ರಾಜೀವ್‍ಗೌಡ ಹಾಗು ಆಂಜಿನಪ್ಪ (ಪುಟ್ಟು)
- ಕಲ್ಯಾಣಿ ತ್ಯಾಜ್ಯವನ್ನು ತೆರವುಗೊಳಿಸಲು ನಾಗರೀಕರ ಒತ್ತಾಯ
- ಪಂಚಾಯಿತಿಗೊಂದು ಗುಣಮಟ್ಟದ ಶಾಲೆ ನಿರ್ಮಾಣಕ್ಕೆ ಆದ್ಯತೆ
- ಸ್ವಾಮೀಜಿ ಮೇಲೆ ಹಲ್ಲೆ, ಗಾಯಗೊಂಡ ಸ್ವಾಮೀಜಿ ಆಸ್ಪತ್ರೆಗೆ ದಾಖಲು
