ವಿಜಯಪುರ (ದೇವನಹಳ್ಳಿ): ಇಲ್ಲಿನ ಮೇಲೂರು ರಸ್ತೆಯ ಮಾರ್ಗವಾಗಿ ಇರುವ ಪುರಾತನ ಕಾಲದ ನಾಗರಬಾವಿ ಕಲ್ಯಾಣಿಯನ್ನು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯ ಆರಂಭಗೊಂಡಿದೆ.
ಓನೈನ್ ಟೆಕ್ನಾಲಜಿ ಇಂಡಿಯಾ, ಬ್ರೆವೋ ವೆಂಚರ್ಸ್ ಇಂಡಿಯಾ ಹಾಗೂ ಇಂಡಿಯಾ ಕೇರ್ಸ್ ಪೌಂಡೇಶನ್ ವತಿಯಿಂದ ನಾಗರಬಾವಿ ಕಲ್ಯಾಣಿಯ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದ್ದು, ನಾಗರಬಾವಿಯ ಕಲ್ಯಾಣಿಗಳ ಮೆಟ್ಟಿಲು, ತಳದಲ್ಲಿ ಬೆಳೆದಿದ್ದ ಗಿಡಗಂಟಿಗಳ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ.
`ಎನ್‍ಜಿಓ ಸಂಸ್ಥೆಗಳ ಸಹಯೋಗದಲ್ಲಿ ಕಲ್ಯಾಣಿ ಹಾಗೂ ಕುಂಟೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ವಿಜಯಪುರ ಪಟ್ಟಣದ ಸಮೀಪದ ನಲ್ಲೂರು ಕಲ್ಯಾಣಿ, ನಾಗರಬಾವಿ, ತದ ನಂತರ ಬಿಜ್ಜವಾರ ಕಲ್ಯಾಣಿಯನ್ನು ಮೊದಲ ಹಂತವಾಗಿ ಸ್ವಚ್ಛಗೊಳಿಸಿ ಅಭಿವೃದ್ಧಿ ಪಡಿಸಲಾಗುವುದು, 2 ನೇ ಹಂತವಾಗಿ ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ಮತ್ತೆ ಇದೇ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಇಂಡಿಯಾ ಕೇರ್ಸ್ ಪೌಂಡೇಶನ್ ನ ಮಂಜುನಾಥ್ ತಿಳಿಸಿದರು.
ನಾಗರಬಾವಿ ಕಲ್ಯಾಣಿ ಸ್ವಚ್ಛತೆ ಕಾರ್ಯ ನಡೆಯಿತು.
Trending
- ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು ; ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಅವಾಚ್ಯ ಶಬ್ದ ಬಳಸಿ ಧಮಕಿ
- ಚಿಕ್ಕಬಳ್ಳಾಪುರದ ಎಯು ಜ್ಯುವೆಲರ್ಸ್ ಕಳ್ಳತನ ಪ್ರಕರಣ ಆರೋಪಿಗಳ ಬಂಧನ, 21 ಕೆಜಿ ಬೆಳ್ಳಿ ವಶ
- ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವೆ : ಶಾಸಕ ಬಿ.ಎನ್.ರವಿಕುಮಾರ್
- ಚಿಮುಲ್ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ : ಕಾಂಗ್ರೆಸ್ ಮುಖಂಡ ರಾಜೀವ್‍ಗೌಡ ಹಾಗು ಆಂಜಿನಪ್ಪ (ಪುಟ್ಟು)
- ಕಲ್ಯಾಣಿ ತ್ಯಾಜ್ಯವನ್ನು ತೆರವುಗೊಳಿಸಲು ನಾಗರೀಕರ ಒತ್ತಾಯ
- ಪಂಚಾಯಿತಿಗೊಂದು ಗುಣಮಟ್ಟದ ಶಾಲೆ ನಿರ್ಮಾಣಕ್ಕೆ ಆದ್ಯತೆ
- ಸ್ವಾಮೀಜಿ ಮೇಲೆ ಹಲ್ಲೆ, ಗಾಯಗೊಂಡ ಸ್ವಾಮೀಜಿ ಆಸ್ಪತ್ರೆಗೆ ದಾಖಲು
