ವಿಜಯಪುರ: ಜಿಲ್ಲಾಡಳಿತ ಭವನದ ಎದುರು ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಶ್ವಗುರು ಬಸವೇಶ್ವರರ ಕಂಚಿನ ಪ್ರತಿಮೆ ಅನಾವರಣಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಶ್ರೀಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆ ನಿರ್ಮಾಣ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು.
ಶ್ರೀಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ವಿ.ಮಂಜುನಾಥ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಸವೇಶ್ವರ ಪ್ರತಿಮೆಯನ್ನು ಜಿಲ್ಲಾಡಳಿತ ಭವನದ ಎದುರು 500 ಕೆ.ಜಿ ತೂಕದ 40 ಲಕ್ಷ ವೆಚ್ಚದಲ್ಲಿ ಕರಲಿಂಗ ಪೂಜೆ ಮಾಡುತ್ತಿರುವ ಶೈಲಿಯಲ್ಲಿ ಪ್ರತಿಮೆಯನ್ನು ಸ್ಥಾಪನೆ ಮಾಡಲು ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ. ಕಲ್ಲಿನ ಮಂಟಪದ ಕಂಬಗಳ ಮೇಲೆ ವಚನಗಳ ಬರಹಗಳು, ಶಿಲ್ಪಿಗಳ ಚಿತ್ರಗಳು ಇರಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರೊಂದಿಗೆ ನಡೆಸಿದ್ದ ಪೂರ್ವಭಾವಿ ಸಭೆಯಲ್ಲಿ, ತೀರ್ಮಾನಿಸಿರುವಂತೆ ಸಮಿತಿಯನ್ನು ರಚಿಸಿ, ಸಾಂಸ್ಕøತಿಕ ನಾಯಕನ ಪ್ರತಿಮೆ ಅನಾವರಣಗೊಳಿಸಲು ಸಿದ್ಧತೆ ನಡೆಯುತ್ತಿದ್ದು, ಈಗಾಗಲೇ ಪ್ರತಿಮೆಯನ್ನು ಅನಾವರಣಗೊಳಿಸಲು ಮಂಟಪ ಶೇ 80 ರಷ್ಟು ಸಿದ್ಧವಾಗಿದೆ. ಪ್ರತಿಮೆಯೂ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಫೆಬ್ರವರಿ ಕೊನೆಯ ವಾರದಲ್ಲಿ ಅನಾವರಣಗೊಳಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕøತಿ ಇಲಾಖೆಯು ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ಬಿಡುಗಡೆಗೊಳಿಸಿ, ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು.
ಸಾಂಸ್ಕೃತಿಕ ಜಿಲ್ಲೆಯಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಗೂ ಬಸವೇಶ್ವರರ ಪ್ರತಿಮೆಯು ಉತ್ತಮ ಸಂದೇಶವನ್ನು ಸಾರಲಿದೆ. ಜಾತಿ, ಮತ, ಬೇಧವನ್ನು ಬಿಟ್ಟು, ಎಲ್ಲರೂ ಸಾಮರಸ್ಯದಿಂದ ಬದುಕು ಕಟ್ಟಿಕೊಳ್ಳಲು ಪ್ರತಿಮೆಯು ಉತ್ತಮ ಸಂಕೇತವಾಗಲಿದೆ. ವೀರ ಶೈವ ಲಿಂಗಾಯತ ಸಮುದಾಯದವರು ಮತ್ತು ಬಸವ ತತ್ವಗಳಲ್ಲಿ ನಂಬಿಕೆ ಇಟ್ಟಿರುವ ಇತರೆ ಸಮುದಾಯದವರು ಬಸವೇಶ್ವರರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ ಎಂದರು.
ಶ್ರೀಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆ ನಿರ್ಮಾಣ ಸಮಿತಿಯ ಅಧ್ಯಕ್ಷ ಎಂ.ಎಸ್.ರಮೇಶ್, ಉಪಾಧ್ಯಕ್ಷ ಕೆ.ಹೆಚ್.ಜಗದೀಶ್, ಪ್ರಧಾನ ಕಾರ್ಯದರ್ಶಿ ಎಸ್.ವಿಜಯ್ ಕುಮಾರ್, ಖಜಾಂಚಿ ಎಸ್.ನಾಗೇಶ್, ಸದಸ್ಯರಾದ ಸಿ.ವಿರೂಪಾಕ್ಷ ಶಾಸ್ತ್ರಿ, ಎಸ್.ವಿರೂಪಾಕ್ಷಯ್ಯ, ಎಂ.ಸತೀಶ್ ಕುಮಾರ್, ಎಸ್.ಭಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.
Trending
- ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು ; ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಅವಾಚ್ಯ ಶಬ್ದ ಬಳಸಿ ಧಮಕಿ
- ಚಿಕ್ಕಬಳ್ಳಾಪುರದ ಎಯು ಜ್ಯುವೆಲರ್ಸ್ ಕಳ್ಳತನ ಪ್ರಕರಣ ಆರೋಪಿಗಳ ಬಂಧನ, 21 ಕೆಜಿ ಬೆಳ್ಳಿ ವಶ
- ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವೆ : ಶಾಸಕ ಬಿ.ಎನ್.ರವಿಕುಮಾರ್
- ಚಿಮುಲ್ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ : ಕಾಂಗ್ರೆಸ್ ಮುಖಂಡ ರಾಜೀವ್‍ಗೌಡ ಹಾಗು ಆಂಜಿನಪ್ಪ (ಪುಟ್ಟು)
- ಕಲ್ಯಾಣಿ ತ್ಯಾಜ್ಯವನ್ನು ತೆರವುಗೊಳಿಸಲು ನಾಗರೀಕರ ಒತ್ತಾಯ
- ಪಂಚಾಯಿತಿಗೊಂದು ಗುಣಮಟ್ಟದ ಶಾಲೆ ನಿರ್ಮಾಣಕ್ಕೆ ಆದ್ಯತೆ
- ಸ್ವಾಮೀಜಿ ಮೇಲೆ ಹಲ್ಲೆ, ಗಾಯಗೊಂಡ ಸ್ವಾಮೀಜಿ ಆಸ್ಪತ್ರೆಗೆ ದಾಖಲು
