ಚಿಕ್ಕಬಳ್ಳಾಪುರ: ಗುಣಾತ್ಮಕ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿ ಮಕ್ಕಳನ್ನು ಬೌದ್ಧಿಕವಾಗಿ ಬಲಪಡಿಸಲು ಬುನಾದಿ ಆಧಾರಿತ ಕಲಿಕಾ ಹಬ್ಬ ಹೆಚ್ಚು ಸಹಾಯಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಅಭಿಪ್ರಾಯಪಟ್ಟರು.
ಅವರು ತಾಲ್ಲೂಕಿನ 19 ಕ್ಲಸ್ಟರ್ ನಲ್ಲಿ ಎಸ್ ಗೊಲ್ಲಹಳ್ಳಿ ಕ್ಲಸ್ಟರ್ ಕಲಿಕಾ ಹಬ್ಬ ಉದ್ಘಾಟನೆ ಮಾಡಿದ ನಂತರ ಮಾತನಾಡಿ, ಕನ್ನಡ ಭಾಷಾ ಮತ್ತು ಗಣಿತ ಬುನಾದಿ ಆಧಾರಿತ ಕಲಿಕಾ ಸಾಮರ್ಥ್ಯಗಳನ್ನು ಪ್ರೋತ್ಸಾಹ ಮಾಡುವ ವಿಧಾನದ ಕಾರ್ಯಕ್ರಮ ಆಗಿದೆ. ಇಂತಹ ಕಲಿಕಾ ಹಬ್ಬಗಳನ್ನು ತಾಲ್ಲೂಕಿನ 19 ಕ್ಲಸ್ಟರ್ ಗಳಿದ್ದು, ಪ್ರಥಮ ಕ್ಲಸ್ಟರ್ ಆಗಿ ಕಲಿಕಾ ಹಬ್ಬ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದಲ್ಲದೇ ಇದೇ ತಿಂಗಳಲ್ಲಿ ಎಲ್ಲಾ ಕ್ಲಸ್ಟರ್ಗಳಲ್ಲಿ ಕಲಿಕಾ ಹಬ್ಬ ಆಚರಣೆ ಮಾಡುತ್ತೇವೆ ಎಂದರು.
ಕಲಿಕಾ ಹಬ್ಬದಲ್ಲಿ ನಡೆಯುವ ಒಟ್ಟು ಚಟುವಟಿಕೆ ಸ್ವರ್ಧೆಗಳಲ್ಲಿ ಪೋಷಕರು ಮತ್ತು ಮಕ್ಕಳ ಸಹ ಸಂಬಂಧ ಚಟುವಟಿಕೆ ಹಮ್ಮಿಕೊಂಡಿರುವುದು ಸಾಮಾಜಿಕ ಪರಿಸರದಲ್ಲಿ ಉತ್ತಮ ಬಾಂಧವ್ಯ ಬೆರೆಯುತ್ತದೆ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಸ್ವಾಮಿ ಮಾತನಾಡಿ, 1 ರಿಂದ 5 ನೇ ತರಗತಿ ಮಕ್ಕಳಿಗೆ ನಡೆಯುವ ಹಬ್ಬ ಎಪ್. ಎಲ್.ಎನ್ ಕಲಿಕಾ ಹಬ್ಬ ಆಗಿದೆ. ಮಕ್ಕಳಲ್ಲಿ ಕಲಿಕೆಯನ್ನು ಚುರುಕು ಮಾಡುವ ಕಾರ್ಯಕ್ರಮ ಸರ್ಕಾರ ಜಾರಿಗೆ ತಂದಿರೋದು ಬಹಳ ಖುಷಿ ವಿಚಾರ ಆಗಿದೆ ಎಂದರು.
ಶಾಲೆಯಲ್ಲಿ ಶಿಕ್ಷಕರು ಬೋಧಿಸಿರುವ ಭಾಷೆ , ಗಣಿತ, ಪರಿಸರ ಆರೋಗ್ಯ ಚಟುವಟಿಕೆಯಲ್ಲಿ ಮಕ್ಕಳು ಮತ್ತು ಪೋಷಕರನ್ನು ಭಾಗವಹಿಸುವಂತೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದಲ್ಲದೇ, ಮಕ್ಕಳಲ್ಲಿ ಸೂಕ್ತವಾದ ಪ್ರತಿಬೆಯನ್ನು ಗುರುತಿಸುವ ವೇದಿಕೆಯಲ್ಲಿ ಸಮುದಾಯ ವರ್ಗ ಸಹಕಾರ ಸಲಹೆಗಳು ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಗಟ್ಟಿ ಓದು, ಕಥೆ ಹೇಳುವುದು, ಮೆಮೊರಿ ಪರೀಕ್ಷೆ, ರಸಪ್ರಶ್ನೆ, ಆರೋಗ್ಯ ಮತ್ತು ಪೌಷ್ಠಿಕಾಂಶ ವಲಯ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಿತು. ಪ್ರತಿ ಶಾಲೆಗಳಿಂದ ತಲಾ 8 ಮಕ್ಕಳಂತೆ 13 ಶಾಲೆಗಳಿಂದ ಒಟ್ಟು 100 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. ಈ ವೇಳೆ ಮಕ್ಕಳಿಂದ ಊರಿನ ಪ್ರಮುಖ ಬೀದಿಗಳಲ್ಲಿ ವಾದ್ಯ ಘೋಷ್ಟಿಗಳೊಂದಿಗೆ ಕಲಿಕಾ ಹಬ್ಬ ಎಂದು ಘೋಷವಾಕ್ಯಗಳನ್ನು ಕೂಗುತ್ತಾ ಮೆರವಣಿಗೆ ಸಾಗಿದರು. ಮಕ್ಕಳಿಗಾಗಿ ಇನ್ಸ್ಟಾಗ್ರಾಮ್ ಸೆಲ್ಫಿ ಫ್ರೇಮ್ ತರ, ವಿಶೇಷವಾಗಿ ಮಕ್ಕಳ ಕಲಿಕಾ ಹಬ್ಬ ಫ್ರೇಮ್ ನಲ್ಲಿ ಬಿಇಓ, ತಾಲ್ಲೂಕು ಅಧಿಕಾರಿಗಳು, ಶಿಕ್ಷಕರು ಮತ್ತು ಮಕ್ಕಳು ಮತ್ತು ಹಲವು ಪೋಷಕರು ಸೆಲ್ಫಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದರು.
7 ಚಟುವಟಿಕೆಗಳಲ್ಲಿ ವಿಜೇತರಾದ ಒಟ್ಟು 24 ಮಕ್ಕಳು, ಮೂವರು ಪೋಷಕರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಡಯಟ್ ಹಿರಿಯ ಉಪನ್ಯಾಸಕಿ ಲಕ್ಷ್ಮಮ್ಮ , ಅಕ್ಷರ ದಾಸೋಹ ನಿರ್ದೇಶಕಿ ಲಕ್ಷ್ಮೀ ದೇವಮ್ಮ, ಕ್ಷೇತ್ರ ಸಮನ್ವಯ ಅಧಿಕಾರಿ ಅರುಣ್ ಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿ ಮಂಜುನಾಥ, ಬಿ.ಐಆರ್.ಟಿ ಅಧಿಕಾರಿ ಕೃಷ್ಣಪ್ಪ, ರಾಜಣ್ಣ, ಬಡ್ತಿ ಮುಖ್ಯ ಶಿಕ್ಷಕಿ ನಳಿನ, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಹೇಮಾವತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Trending
- ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು ; ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಅವಾಚ್ಯ ಶಬ್ದ ಬಳಸಿ ಧಮಕಿ
- ಚಿಕ್ಕಬಳ್ಳಾಪುರದ ಎಯು ಜ್ಯುವೆಲರ್ಸ್ ಕಳ್ಳತನ ಪ್ರಕರಣ ಆರೋಪಿಗಳ ಬಂಧನ, 21 ಕೆಜಿ ಬೆಳ್ಳಿ ವಶ
- ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವೆ : ಶಾಸಕ ಬಿ.ಎನ್.ರವಿಕುಮಾರ್
- ಚಿಮುಲ್ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ : ಕಾಂಗ್ರೆಸ್ ಮುಖಂಡ ರಾಜೀವ್‍ಗೌಡ ಹಾಗು ಆಂಜಿನಪ್ಪ (ಪುಟ್ಟು)
- ಕಲ್ಯಾಣಿ ತ್ಯಾಜ್ಯವನ್ನು ತೆರವುಗೊಳಿಸಲು ನಾಗರೀಕರ ಒತ್ತಾಯ
- ಪಂಚಾಯಿತಿಗೊಂದು ಗುಣಮಟ್ಟದ ಶಾಲೆ ನಿರ್ಮಾಣಕ್ಕೆ ಆದ್ಯತೆ
- ಸ್ವಾಮೀಜಿ ಮೇಲೆ ಹಲ್ಲೆ, ಗಾಯಗೊಂಡ ಸ್ವಾಮೀಜಿ ಆಸ್ಪತ್ರೆಗೆ ದಾಖಲು
