Subscribe to Updates
Get the latest creative news from FooBar about art, design and business.
- ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು ; ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಅವಾಚ್ಯ ಶಬ್ದ ಬಳಸಿ ಧಮಕಿ
- ಚಿಕ್ಕಬಳ್ಳಾಪುರದ ಎಯು ಜ್ಯುವೆಲರ್ಸ್ ಕಳ್ಳತನ ಪ್ರಕರಣ ಆರೋಪಿಗಳ ಬಂಧನ, 21 ಕೆಜಿ ಬೆಳ್ಳಿ ವಶ
- ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವೆ : ಶಾಸಕ ಬಿ.ಎನ್.ರವಿಕುಮಾರ್
- ಚಿಮುಲ್ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ : ಕಾಂಗ್ರೆಸ್ ಮುಖಂಡ ರಾಜೀವ್ಗೌಡ ಹಾಗು ಆಂಜಿನಪ್ಪ (ಪುಟ್ಟು)
- ಕಲ್ಯಾಣಿ ತ್ಯಾಜ್ಯವನ್ನು ತೆರವುಗೊಳಿಸಲು ನಾಗರೀಕರ ಒತ್ತಾಯ
- ಪಂಚಾಯಿತಿಗೊಂದು ಗುಣಮಟ್ಟದ ಶಾಲೆ ನಿರ್ಮಾಣಕ್ಕೆ ಆದ್ಯತೆ
- ಸ್ವಾಮೀಜಿ ಮೇಲೆ ಹಲ್ಲೆ, ಗಾಯಗೊಂಡ ಸ್ವಾಮೀಜಿ ಆಸ್ಪತ್ರೆಗೆ ದಾಖಲು
Author: Janasaakshi
ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ಹಿನ್ನಲೆ ಜಿಲ್ಲೆಯ ಪ್ರವಾಸಿ ತಾಣಗಳಾದ ಇಶಾ ಪೌಂಡೇಷನ್, ನಂದಿಬೆಟ್ಟ, ಅವುಲಬೆಟ್ಟ, ಶ್ರೀನಿವಾಸ ಸಾಗರಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡಿದ್ದು,ವಿಶ್ವ ವಿಖ್ಯಾತ ನಂದಿ ಗಿರಿಧಾಮಕ್ಕೆ ಗುರುವಾರವಾದ ಇಂದು 20 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಭೇಟಿ ನೀಡಿ ಗಿರಿಧಾಮದ ಪ್ರಾಕೃತಿಕ ಸೌಂದರ್ಯವನ್ನು ಸವಿದರು. ನೂತನ ವರ್ಷಾಚರಣೆ ಹಿನ್ನಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಪ್ರಸಿದ್ಧ ಸ್ಥಳವಾದ ನಂದಿ ಗಿರಿಧಾಮಕ್ಕೆ 2025ರ ಡಿಸೆಂಬರ್ 31 ರ ಮಧ್ಯಾಹ್ನ 3 ಗಂಟೆಯಿಂದ 2026ರ ಜನವರಿ 01 ರ ಬೆಳಿಗ್ಗೆ 10 ಗಂಟೆಯವರೆಗೆ ಸಾರ್ವಜನಿಕ ನಿಷೇಧಾಜ್ಞೆಯನ್ನು ವಿಧಿಸಿ ಆದೇಶಿಸಲಾಗಿತ್ತು. ನಂದಿಗಿರಿಧಾಮ ವೀಕ್ಷಣೆಗೆ ಸಹಸ್ರಾರು ಮಂದಿ ಪ್ರವಾಸಿಗರು ವರ್ಷದ ಮೊದಲ ದಿನವಾದ ಗುರುವಾರ ಆಗಮಿಸಿದ್ದರು. ಪ್ರವಾಸಿಗರು ಬೆಟ್ಟದಲ್ಲಿ ಮೋಜು, ಮಸ್ತಿಯಲ್ಲಿ ತೊಡಗಿದ್ದ ದೃಶ್ಯಗಳು ಎಲ್ಲೆಡೆ ಕಂಡು ಬಂದವು. ಬೆಂಗಳೂರಿನ ಐಟಿ, ಬಿಟಿ ಉದ್ಯೋಗಿಗಳು, ಪರಿಸರ ಪ್ರಿಯರು ಗಿರಿಧಾಮಕ್ಕೆ ಆಗಮಿಸಿ ಸೂರ್ಯಾಸ್ತದ ಕ್ಷಣಗಳನ್ನು ಕಣ್ಣು ತುಂಬಿಸಿಕೊಂಡರು. ನಂದಿಗಿರಿಧಾಮಕ್ಕೆ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬಂದ ಹಿನ್ನಲೆ ಬೆಟ್ಟದ…
ಚಿಕ್ಕಬಳ್ಳಾಪುರ: 2026 ನೇ ಹೊಸ ವರ್ಷ ಜಿಲ್ಲೆಯ ಹೈನೋದ್ಯಮದಲ್ಲಿ ತೊಡಗಿಸಿಕೊಂಡಿರುವ ಹಾಲು ಉತ್ಪಾದಕರಿಗೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಸಂತಸದ ಸುದ್ದಿ ನೀಡಿದೆ. ಇಂದಿನಿಂದಲೇ ಒಂದು ಲೀಟರ್ ಹಾಲಿಗೆ ಒಂದು ರೂಪಾಯಿ ಹೆಚ್ಚಿಸಿ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರಿಗೆ ಹೊಸ ವರ್ಷಕ್ಕೆ ಹೊಸ ಕೊಡುಗೆಯನ್ನ ನೀಡಿದೆ. ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಹೊಸ ವರ್ಷಕ್ಕೆ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ನೀಡಿದೆ ಜಿಲ್ಲೆಯ ಹಾಲು ಉತ್ಪಾದಕರಿಗೆ 2026 ಜನವರಿ ಜನವರಿ 1 ರಿಂದಲೇ ಲೀಟರ್ ಹಾಲಿಗೆ ಒಂದು ರೂಪಾಯಿ ಬೆಲೆ ಹೆಚ್ಚಿಸಿ ಹಾಲು ಉತ್ಪಾದಕರಿಗೆ ಸಂತೋಷದ ಸುದ್ದಿ ನೀಡಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಒಕ್ಕೊಟವು ಕೋಲಾರ ಜಿಲ್ಲಾ ಸಹಕಾರ ಹಾಲು ಒಕ್ಕೊಟದಿಂದ ಬೇರ್ಪಟ್ಟು 3.90 ಲಕ್ಷ ಲೀಟರ್ ಹಾಲು ಶೇಖರಣೆಯಿಂದ ಕಾರ್ಯರಂಭಗೊಂಡ ಒಕ್ಕೂಟ ಈಗ 5.0 ಲಕ್ಷ ಲೀಟರ್ ಹಾಲು ಪ್ರತಿದಿನ ಶೇಖರಣೆ ಮಾಡುತ್ತಿದೆ. ಈಗ ಚಳಿಗಾಲ ಪ್ರಾರಂಭವಾಗಿರುವುದರಿಂದ ಹಾಲು ಉತ್ಪಾದನೆ ಕಡಿಮೆ ಇದೆ ಇತಹ ಸಂಕಷ್ಟ ಸಂದರ್ಭದಲ್ಲಿ ಉತ್ಪಾದಕರ ಕಷ್ಟಕ್ಕೆ ಸ್ಪಂದಿಸಿ…
ಶಿಡ್ಲಘಟ್ಟ : ಈಗಾಗಲೇ ನೌಕರರ ಭವನ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದ್ದು ಗುರುಭವನ ನಿರ್ಮಾಣ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ತಾಲ್ಲೂಕಿನ ಅಭಿವೃದ್ಧಿಗಾಗಿ ಸರ್ಕಾರಿ ನೌಕರರು ಶ್ರಮವಹಿಸಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು. ತಾಲ್ಲೂಕಿನ ಮೇಲೂರು ಗ್ರಾಮದ ಅವರ ಗೃಹಕಚೇರಿಯಲ್ಲಿ ಸರ್ಕಾರಿ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯಲ್ಲಿ ಆಡಳಿತ ವರ್ಗದವರ, ನೌಕರರ ಪಾತ್ರ ಮಹತ್ವಪೂರ್ಣದ್ದು ನೌಕರರ ಹಿತ ಕಾಯಬೇಕಾದ್ದು ಎಲ್ಲರ ಕರ್ತವ್ಯ ಎಂದು ಹೇಳಿದರು. ಈ ವೇಳೆ ಸರ್ಕಾರಿ ನೌಕರರ ಸಂಘದ ಕ್ಯಾಲೆಂಡರ್‌ನ್ನು ಬಿಡುಗಡೆ ಮಾಡಲಾಯಿತು,ಶಾಸಕ ಬಿ.ಎನ್.ರವಿಕುಮಾರ್ ಅವರನ್ನು ಸರ್ಕರಿ ನೌಕರರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ಎನ್.ಗಗನಸಿಂಧು, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಕಾರ್ಯದರ್ಶಿ ಕೆಂಪೇಗೌಡ, ಅಕ್ಕಲರೆಡ್ಡಿ,ಜಗದೀಶ್, ದೇವರಾಜು,ರವಿಕುಮಾರ್, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಲ್.ವಿ.ವೆಂಕಟರೆಡ್ಡಿ, ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ, ತಾಲ್ಲೂಕು ಅಕ್ಷರದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಮಧು, ಟಿಟಿ…
ಶಿಡ್ಲಘಟ್ಟ : ಅಮರಶಿಲ್ಪಿ ಜಕಣಾಚಾರಿ ಕೆಲವೊಂದು ಪ್ರಾಂತ್ಯಕ್ಕೆ ಮಾತ್ರ ಸೀಮಿತವಾದ ವ್ಯಕ್ತಿಯಲ್ಲ ಅವರು ಜಗತ್ತಿನ ಮಹಾನ್ ಪ್ರಸಿದ್ಧ ವ್ಯಕ್ತಿಯಾಗಿದ್ದರು ಅಂತಹ ಚೇತನದ ಸಂಸ್ಮರಣೋತ್ಸವ ಕಾರ್ಯದಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಪುಣ್ಯ ಎಂದು ತಹಸೀಲ್ದಾರ್ ಎನ್.ಗಗನಸಿಂಧು ತಿಳಿಸಿದರು. ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗು ವಿಶ್ವಕರ್ಮ ಸಮುದಾಯದವರಿಂದ ಹಮ್ಮಿಕೊಂಡಿದ್ದ ಅಮರ ಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶಿಲ್ಪ ಕಲೆಗೆ ಅಪಾರ ಕೊಡುಗೆ ನೀಡಿರುವ ಅಮರ ಶಿಲ್ಪಿ ಜಕಣಾಚಾರಿ ಅವರ ಶಿಲ್ಪ ಕೆತ್ತನೆಯ ಕಲೆಗಾರಿಕೆ ಕೆಲಸವು ವಿಶ್ವವೇ ಮೆಚ್ಚುವಂತೆ ಮಾಡಿದೆ ಎಂದರು. ಮುಖ್ಯಭಾಷಣಕಾರರಾಗಿ ಶಿಕ್ಷಕ ಸುಂದರಾಚಾರಿ ಮಾತನಾಡಿ, ವೃತ್ತಿಯಲ್ಲಿ ಪಾವಿತ್ರತೆಯನ್ನು ಕಾಪಾಡಿಕೊಂಡು ಕಾಯಕವೇ ಕೈಲಾಸ ಎಂಬ ಮಾತನ್ನು ಕರಗತ ಮಾಡಿಕೊಂಡ ಅಮರಶಿಲ್ಪಿ ಜಕಣಾಚಾರಿ ಅವರ ತತ್ವ, ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು. ಸಾವಿರಾರು ವರ್ಷಗಳ ಹಿಂದೆ ರಾಜ್ಯದ ಬೇಲೂರು ಹಳೇಬೀಡು ದೇವಸ್ಥಾನಗಳಲ್ಲಿ ಅಮರಶಿಲ್ಪಿ ಜಕಣಾಚಾರಿ ನಿರ್ಮಿಸಿರುವ ಕಲೆಯನ್ನು ಇಂದಿಗೂ ನೋಡಬಹುದಾಗಿದೆ ಎಂದರು. ಈ ಸಂದರ್ಭದಲ್ಲಿ…
ಶಿಡ್ಲಘಟ್ಟ : ಪ್ರತಿ ವರ್ಷ ಶುಕ್ಲ ಪಕ್ಷದ ಪೌರ್ಣಮಿಯಂದು ನಡೆಯುವ ಬ್ರಹ್ಮ ರಥೋತ್ಸವದ ಅಂಗವಾಗಿ ನಲ್ಲರಾಳ್ಳಹಳ್ಳಿ ಶ್ರೀರಾಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ 1 ವಾರದ ಕಾಲ ವಿಶೇಷ ಪೂಜೆಗಳು ನೆರವೇರಲಿವೆ ಎಂದು ತಹಶಿಲ್ದಾರ್ ಎನ್.ಗಗನಸಿಂಧು ತಿಳಿಸಿದರು. ನಗರದ ತಾಲ್ಲೂಕು ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ಬಳಿಯ ರಾಮಲಿಂಗೇಶ್ವರ ಬೆಟ್ಟದ ಶ್ರೀರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವವು ಜ.3ರಂದು ನಡೆಯಲಿದೆ. ಜನವರಿ.2 ರಂದು ಅಂಕುರಾರ್ಪಣೆ, ಧ್ವಜಾರೋಹಣದೊಂದಿಗೆ ಶುರುವಾಗಿ ಪಲ್ಲಕ್ಕಿ ಉತ್ಸವ, ವಸ್ತಾಲಂಕಾರ, ವಿಭೂತಿ ಕುಂಕುಮಾರ್ಚನೆ, ಕಾಶಿಯಾತ್ರೆ ಉತ್ಸವ, ನಂದಿವಾಹನೋತ್ಸವ, ಗಿರಿಜಾ ಕಲ್ಯಾಣೋತ್ಸವ, 3.ರಂದು ಶ್ರೀರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವವು ಜ.3ರಂದು ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್, ಶಾಸಕ ಬಿ.ಎನ್. ರವಿಕುಮಾರ್, ಸಂಸದ ಮಲ್ಲೇಶ್‌ಬಾಬು ಮತ್ತಿತರ ಗಣ್ಯರು ಭಾಗವಹಿಸಿ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಜ.4 ರಿಂದ 7ರವರೆಗೂ ಪ್ರತಿನಿತ್ಯ ದೇವರಿಗೆ ವಿಶೇಷ ಪೂಜೆಗಳು ನಡೆಯಲಿದ್ದು ತಾಲ್ಲೂಕು ಆಡಳಿತದ ಜತೆಗೆ ದೇವಾಲಯದ ಕನ್‌ವೀನರ್ ಎಂ.ಸುನಿತಾ ಶ್ರೀನಿವಾಸರೆಡ್ಡಿ, ಸಮಿತಿಯ ಎಲ್ಲಾ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡು ರಥೋತ್ಸವ ಅದ್ದೂರಿಯಾಗಿ ನಡೆಸುತ್ತಾರೆ. ರಾಮ…
ವಿಜಯಪುರ (ದೇವನಹಳ್ಳಿ): ಎರಡು ವಾಹನದಲ್ಲಿ ಯಾವುದೇ ದಾಖಲೆಯಿಲ್ಲದೇ ಸಾಗಿಸುತ್ತಿದ್ದ 28 ಹಸುಕರುಗಳನ್ನು ಪೊಲೀಸರು ರಕ್ಷಿಸಿ ಪಟ್ಟಣದ ಸಮೀಪದ ಪದ್ಮಾವತಿ ಗೋಶಾಲೆಗೆ ಕಳಿಸಿಕೊಟ್ಟಿದ್ದಾರೆ. ಡಿ.30 ರಂದು ರಾತ್ರಿ 10.30 ಕ್ಕೆ ಚಿಕ್ಕಬಳ್ಳಾಪುರ ಕಡೆಯಿಂದ ಬಂದಂತಹ ಕ್ಯಾಂಟರ್ ಮತ್ತು ಬಲೋರ ವಾಹನವನ್ನು ವಿಜಯಪುರ ಪಟ್ಟಣದಲ್ಲಿ ಪೊಲೀಸರು ತಡೆದಿದ್ದಾರೆ. ವಾಹನ ಪರಿಶೀಲಿಸಿದಾಗ ಯಾವುದೇ ದಾಖಲೆಯಿಲ್ಲದೆ ಕ್ಯಾಂಟರ್‍ನಲ್ಲಿ 20 ಹಸುಕರು, ಬಲೋರ ವಾಹನದಲ್ಲಿ 8 ಹಸು ಕರುಗಳನ್ನು ಅಮಾನೀಯವಾಗಿ ಹಸುಕರುಗಳನ್ನು ಸಾಗಿಸುತ್ತಿರುವುದು ಕಂಡು ಬಂದಿದೆ. ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಮಾಲೀಕರಾದ ವೆಟ್ರಿವೇಲ್, ಮುರಳಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಚಿಕ್ಕಬಳ್ಳಾಪುರ: 1818 ರಲ್ಲಿ ಪೇಶ್ವ ರಾಜ್ಯವನ್ನು ಹಿಮೆಟ್ಟಿಸಿದ ಬೆರಳೆಣಿಕೆಯಷ್ಟು ವೀರ ಕೋರೇಗಾಂವ್ ಸೈನಿಕರ ಸಾಹಸವನ್ನ ಇಡೀ ದೇಶ ಕೊಂಡಾಡುತ್ತಿದೆ. ದೇಶದ ಜನರಿಗೆ ತಿಳಿಯದ ಈ ಮಾಹಿತಿಯನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಲಂಡನ್ ಗ್ರಂಥಾಲಯವೊಂದರಲ್ಲಿ ಪುಸ್ತಕ ಓದುವಾಗ ಮಾಹಿತಿ ತಿಳಿದು ಅಂಬೇಡ್ಕರ್ ನೇರವಾಗಿ ಮಹಾರಾಷ್ಟ್ರದ ಕೋರೇಗಾಂವ್ ಗೇ ಭೇಟಿ ನೀಡಿ ಅಲ್ಲಿನ ಬುಡಕಟ್ಟು ಜನಾಂಗದವರಿಗೆ ಮಾಹಿತಿ ತಿಳಿಸಿ ಅಲ್ಲಿಯೇ ಒಂದು ಬೃಹತ್ ವಿಜಯ ಪತಾಕೆ ಹಾರಿಸಿ ಸ್ಥೂಪ ನಿರ್ಮಿಸಿ ಜನರನ್ನ ಸಂಘಟಿಸಿದರು. ಅಂದಿನಿಂದ ಇದುವರೆಗೂ ಜನವರಿ ಒಂದನ್ನು ಭೀಮ ಕೋರೇಗಾಂವ್ ವಿಜಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ದಲಿತ ಸಂಘರ್ಷ ರಾಜ್ಯ ಸಂಚಾಲಕರು ಸುಧಾ ವೆಂಕಟೇಶ್ ತಿಳಿಸಿದರು. ನಗರದ ಅಂಬೇಡ್ಕರ್ ಭವನದಿಂದ ಶಿಡ್ಲಘಟ್ಟ ವೃತ್ತದವರೆಗೂ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸು.ದಾ.ವೆಂಕಟೇಶ್ ನೇತೃತ್ವದಲ್ಲಿ ದಲಿತ ಮುಖಂಡರು ಕೋರೇಗಾಂವ್ ಯುದ್ಧದಲ್ಲಿ ಗೆದ್ದ ಸ್ಥೂಪದೊಂದಿಗೆ ಮೆರವಣಿಗೆ ನಡೆಸಿದರು. ಡೊಳ್ಳು ತಮಟೆ…
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಜಿ.ಪ್ರಭು ರವರು ಗುರುವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಅಧಿಕಾರ ಸ್ವೀಕಾರ ಮಾಡಿದರು. ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿ ಹೂಗುಚ್ಚ ನೀಡಿ, ಶುಭ ಕೋರಿದರು. ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರಿಗೆ ನೂತನ ಜಿಲ್ಲಾಧಿಕಾರಿ ಜಿ. ಪ್ರಭು ರವರು ಹೂಗುಚ್ಚ ನೀಡಿ ಬಿಳ್ಕೊಡುಗೆ ನೀಡಿದರು. ನೂತನ ಜಿಲ್ಲಾಧಿಕಾರಿಗಳು ಈ ಹಿಂದೆ ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅಧಿಕಾರ ಹಸ್ತಾಂತರ ವೇಳೆ ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ನೂತನ ಜಿಲ್ಲಾಧಿಕಾರಿಗಳಿಗೆ ಶುಭ ಕೋರಿದರು.
ಶಿಡ್ಲಘಟ್ಟ : ಸಿಟಿಜನ್ ಶಾಲೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಕಳೆದ ಹತ್ತು ವರ್ಷಗಳಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿಕೊಂಡಿದ್ದು ತನ್ನದೇ ಆದಂತಹ ಹೆಸರು ಗಳಿಸಿದೆ ಎಂದು ಸಿಟಿಜನ್ ಶಾಲೆಯ ಅಧ್ಯಕ್ಷ ರಾಮಚಂದ್ರರೆಡ್ಡಿ ತಿಳಿಸಿದರು. ನಗರದ ಸಿಟಿಜನ್ ಶಾಲೆಯ 10ನೇ ವರ್ಷದ ವಾರ್ಷಿಕೋತ್ಸವವನ್ನು ನಗರದ ಬಳಿಯ ಹಂಡಿಗನಾಳ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಪಠ್ಯಕ್ರಮದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ನೈತಿಕ ಮೌಲ್ಯಗಳಿಗೆ ಶಾಲೆ ನೀಡುತ್ತಿರುವ ಮಹತ್ವವೇ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಹೇಳಿದರು. ಶಾಲೆಯ ದಶಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವು ಶೈಕ್ಷಣಿಕ ಸಾಧನೆಗಳ ಸ್ಮರಣೆಯ ಜೊತೆಗೆ ಸಾಂಸ್ಕೃತಿಕ ಸಂಭ್ರಮವು ನಡೆಯಿತು. ದೀಪ ಬೆಳಗುವ ಮೂಲಕ ದಶಮಾನೋತ್ಸವದ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳ ನೃತ್ಯ, ಭರತನಾಟ್ಯ ಹಾಗೂ ಸಾಮಾಜಿಕ ಸಂದೇಶ ಸಾರುವ ನಾಟಕಗಳ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದರು ಮಕ್ಕಳ ಕಲಾತ್ಮಕ ಪ್ರದರ್ಶನಗಳು ಪೋಷಕರನ್ನು ಮಂತ್ರ ಮುಗ್ಧಗೊಳಿಸಿದವು. ಶಾಲೆಯ ಆಡಳಿತ…
ಚಿಕ್ಕಬಳ್ಳಾಪುರ: ನಗರದ ವಾಪಸಂದ್ರದಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಇಂದು ಶ್ರೀದೇವಿ, ಭೂ ದೇವಿ ಸಮೇತ ಶ್ರೀ ರಂಗನಾಥಸ್ವಾಮಿಯ ಕಲ್ಯಾಣ ಮಹೋತ್ಸವವನ್ನು ಅತ್ಯಂತ ಶ್ರದ್ಧಾ,ಭಕ್ತಿಭಾವದಿಂದ ನೆರವೇರಿತು. ಕಲ್ಯಾಣ ಮಹೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾದರು. ಬೆಳಿಗ್ಗೆಯಿಂದ ರಂಗನಾಥ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರ,ಹೋಮ–ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಶ್ರದ್ಧಾಪೂರ್ವಕವಾಗಿ ನೆರವೇರಿತು. ದೇವರ ದರ್ಶನಕ್ಕೆ ಆಗಮಿಸಿದ ಭಕ್ತರು ಪೂಜೆಗಳಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು. ವೈಕುಂಠ ಏಕಾದಶಿ ಅಂಗವಾಗಿ ಇಂದಿನಿಂದ ಶ್ರೀದೇವಿ ಭೂದೇವಿ ಸಮೇತ ಶ್ರೀರಂಗನಾಥನ ಕಲ್ಯಾಣೋತ್ಸವ ಹಾಗೂ ಏಕಾದಶಿ ವೃತಚಾರಣೆ ಹಮ್ಮಿಕೊಳ್ಳಲಾಗಿದ್ದು ಹೋಮ ಹವನ ಪಂಚಾಮೃತ ಅಭಿಷೇಕ ವೈಕುಂಠ ದ್ವಾರ ದರ್ಶನ ಮುಕ್ಕೋಟಿ ದ್ವಾದಶಿ ಪೂಜೆ ಏರ್ಪಡಿಸಲಾಗಿದೆ. ಡಿಸೆಂಬರ್ 30 ರಂದು(ಮಂಗಳವಾರ) ನಡೆಯಲಿರುವ ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ರಂಗನಾಥಸ್ವಾಮಿಗೆ ವಿಶೇಷ ಹೂವಿನ ಅಲಂಕಾರ, ದೀಪಾಲಂಕಾರ,ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ, ವೈಕುಂಠದ್ವಾರ ದರ್ಶನ ಹಾಗೂ ಮುಕ್ಕೋಟಿ ದ್ವಾದಶಿ ಪೂಜೆಗಳನ್ನು ಭಕ್ತಿಭಾವದಿಂದ ಏರ್ಪಡಿಸಲಾಗಿದೆ.ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ…