ಚಿಕ್ಕಬಳ್ಳಾಪುರ: 1818 ರಲ್ಲಿ ಪೇಶ್ವ ರಾಜ್ಯವನ್ನು ಹಿಮೆಟ್ಟಿಸಿದ ಬೆರಳೆಣಿಕೆಯಷ್ಟು ವೀರ ಕೋರೇಗಾಂವ್ ಸೈನಿಕರ ಸಾಹಸವನ್ನ ಇಡೀ ದೇಶ ಕೊಂಡಾಡುತ್ತಿದೆ. ದೇಶದ ಜನರಿಗೆ ತಿಳಿಯದ ಈ ಮಾಹಿತಿಯನ್ನು ಡಾ. ಬಿ.ಆರ್. ಅಂಬೇಡ್ಕರ್ ಅವರು ಲಂಡನ್ ಗ್ರಂಥಾಲಯವೊಂದರಲ್ಲಿ ಪುಸ್ತಕ ಓದುವಾಗ ಮಾಹಿತಿ ತಿಳಿದು ಅಂಬೇಡ್ಕರ್ ನೇರವಾಗಿ ಮಹಾರಾಷ್ಟ್ರದ ಕೋರೇಗಾಂವ್ ಗೇ ಭೇಟಿ ನೀಡಿ ಅಲ್ಲಿನ ಬುಡಕಟ್ಟು ಜನಾಂಗದವರಿಗೆ ಮಾಹಿತಿ ತಿಳಿಸಿ ಅಲ್ಲಿಯೇ ಒಂದು ಬೃಹತ್ ವಿಜಯ ಪತಾಕೆ ಹಾರಿಸಿ ಸ್ಥೂಪ ನಿರ್ಮಿಸಿ ಜನರನ್ನ ಸಂಘಟಿಸಿದರು. ಅಂದಿನಿಂದ ಇದುವರೆಗೂ ಜನವರಿ ಒಂದನ್ನು ಭೀಮ ಕೋರೇಗಾಂವ್ ವಿಜಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ದಲಿತ ಸಂಘರ್ಷ ರಾಜ್ಯ ಸಂಚಾಲಕರು ಸುಧಾ ವೆಂಕಟೇಶ್ ತಿಳಿಸಿದರು. ನಗರದ ಅಂಬೇಡ್ಕರ್ ಭವನದಿಂದ ಶಿಡ್ಲಘಟ್ಟ ವೃತ್ತದವರೆಗೂ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸು.ದಾ.ವೆಂಕಟೇಶ್ ನೇತೃತ್ವದಲ್ಲಿ ದಲಿತ ಮುಖಂಡರು ಕೋರೇಗಾಂವ್ ಯುದ್ಧದಲ್ಲಿ ಗೆದ್ದ ಸ್ಥೂಪದೊಂದಿಗೆ ಮೆರವಣಿಗೆ ನಡೆಸಿದರು. ಡೊಳ್ಳು ತಮಟೆ ಸದ್ದಿನೊಂದಗೆ ಸಾಗಿದ ಮೆರವಣಿಗೆ ಹೋರಾಟಗಾರರ ವಿಜಯೋತ್ಸವವನ್ನೇ ನೆನಪಿಸುವಂತಿತ್ತು. ಶಿಡ್ಲಘಟ್ಟ ವೃತ್ತದಲ್ಲಿ ಸ್ಥೂಪಕ್ಕೆ ಹೂವಿನ ಸಿಂಚನ ಮಾಡಿ ವಿಜಯೋತ್ಸವದ ಸಂಕೇತವನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕರು ಸು.ಧಾ. ವೆಂಕಟೇಶ್ ಮಾತನಾಡಿ, ಮೂವತ್ತು ಸಾವಿರ ಸೈನಿಕರನ್ನು ಕೇವಲ ಐನೂರು ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನವೇ ಭೀಮಾ ಕೋರೇಗಾಂವ್ . ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಕೆಚ್ಚೆದೆಯ ಹೋರಾಟ ನಡೆಸಿದರು. ಶೋಷಿತರು ಮೇಲ್ಜಾತಿ ಶೋಷಕರ ವಿರುದ್ಧ ಯುದ್ಧ ಘೋಷಿಸಿ ಗೆಲುವು ಸಾಧಿಸಿದರು. ಅದು ಭೀಮಾ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ‘ಭೀಮಾ ಕೋರೇಗಾಂವ್ ಯುದ್ಧ’ವೆಂದೇ ಪ್ರಸಿದ್ಧವಾಗಿದೆ ಎಂದರು.
ವಿಜಯೋತ್ಸವದಲ್ಲಿ ಛಲವಾದಿ ವೆಂಕಟ್,ಉಪನ್ಯಾಸಕ ಚಂದ್ರಶೇಖರ್,ಸೂಲಿಕುಂಟೆ ವೆಂಕಟೇಶ್, ಕಂಡಾಕ್ಟರ್ ಶ್ರೀನಿವಾಸ್, ಅಂಜಿನಪ್ಪ ಮುಕ್ಕಳಪ್ಪ ಇತರರು ಇದ್ದರು
