ಚಿಕ್ಕಬಳ್ಳಾಪುರ: ತಾಲೂಕಿನ ಅಜ್ಜವಾರ ಗೇಟ್ ಬಳಿ ಗುರುವಾರ ರಾತ್ರಿ ಚರ್ಚ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮ ಮುಗಿಸಿ ಬೈಕಿನಲ್ಲಿ ಸ್ವ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ನಾಲ್ವರು ಯುವಕರ ಸ್ವ ಗ್ರಾಮಕ್ಕೆ ಸಂಸದ ಡಾ.ಕೆ.ಸುಧಾಕರ್ ಭೇಟಿ ನೀಡಿ ಮೃತರ ಪೋಷಕರಿಗೆ ಮತ್ತು ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ, ತಲಾ 50,000 ರೂಪಾಯಿ ಸಹಾಯಧನ ನೀಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಡಾ.ಕೆ.ಸುಧಾಕರ್ ಅವರು, ಬಾಳಿ ಬದುಕಬೇಕಾದ ಯುವಕರು ದಾರುಣ ಸಾವನ್ನಪ್ಪಿರುವುದು ಇಡೀ ಅಜ್ಜಾವರ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ. ಆ ನತದೃಷ್ಟ ಹೆತ್ತವರ ದುಃಖ ಹೇಳತೀರದಾಗಿದ್ದು ಅವರ ನೋವಿನಲ್ಲಿ ನಾನೂ ಭಾಗಿ ಎಂದ ಅವರು, ಇತ್ತೀಚೆಗೆ ರಸ್ತೆ ಅಪಘಾತಗಳಲ್ಲಿ ಯುವಕರು ಪ್ರಾಣ ಕಳೆದುಕೊಳ್ಳುತ್ತಿರುವುದು ಅತ್ಯಂತ ನೋವಿನ ಮತ್ತು ಆಘಾತಕಾರಿ ಸಂಗತಿ. ಹೆಲ್ಮೆಟ್ ಇಲದೆ ಬೈಕ್ ಚಲಾಯಿಸುವುದು, ಟ್ರಿಬಲ್ ರೈಡಿಂಗ್ ಹೋಗುವುದು, ಅತಿಯಾದ ವೇಗದಲ್ಲಿ ವಾಹನ ಚಲಾಯಿಸುವುದು, ಟ್ರಾಫಿಕ್ ನಿಯಮ ಪಾಲಿಸದಿರುವುದು ಇಂತಹ ದುಸ್ಸಾಹಸಗಳು ಕ್ಷಣಮಾತ್ರದಲ್ಲಿ ಜೀವಕ್ಕೇ ಕುತ್ತು ತರುತ್ತಿವೆ.ಆದ್ದರಿಂದ ಯುವಕರು ವಾಹನ ಚಲಾಯಿಸುವಾಗ ಅತ್ಯಂತ ಜಾಗರೂಕತೆಯಿಂದ ಇರಬೇಕು ಮತ್ತು ಪೋಷಕರು ಮಕ್ಕಳಿಗೆ ಸೂಕ್ತ ರೀತಿಯಲ್ಲಿ ಮುನ್ನಚ್ಚರಿಕೆ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.
Trending
- ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು ; ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಅವಾಚ್ಯ ಶಬ್ದ ಬಳಸಿ ಧಮಕಿ
- ಚಿಕ್ಕಬಳ್ಳಾಪುರದ ಎಯು ಜ್ಯುವೆಲರ್ಸ್ ಕಳ್ಳತನ ಪ್ರಕರಣ ಆರೋಪಿಗಳ ಬಂಧನ, 21 ಕೆಜಿ ಬೆಳ್ಳಿ ವಶ
- ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವೆ : ಶಾಸಕ ಬಿ.ಎನ್.ರವಿಕುಮಾರ್
- ಚಿಮುಲ್ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ : ಕಾಂಗ್ರೆಸ್ ಮುಖಂಡ ರಾಜೀವ್‍ಗೌಡ ಹಾಗು ಆಂಜಿನಪ್ಪ (ಪುಟ್ಟು)
- ಕಲ್ಯಾಣಿ ತ್ಯಾಜ್ಯವನ್ನು ತೆರವುಗೊಳಿಸಲು ನಾಗರೀಕರ ಒತ್ತಾಯ
- ಪಂಚಾಯಿತಿಗೊಂದು ಗುಣಮಟ್ಟದ ಶಾಲೆ ನಿರ್ಮಾಣಕ್ಕೆ ಆದ್ಯತೆ
- ಸ್ವಾಮೀಜಿ ಮೇಲೆ ಹಲ್ಲೆ, ಗಾಯಗೊಂಡ ಸ್ವಾಮೀಜಿ ಆಸ್ಪತ್ರೆಗೆ ದಾಖಲು
