ಭಾರತ ಕ್ರಿಕೆಟ್ ತಂಡ ದಿಟ್ಟ ಬೌಲಿಂಗ್ ಹಾಗೂ ಬ್ಯಾಟಿಂಗ್ ನಿಂದ ಮೂರನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಪ್ರಿಕಾ ವಿರುದ್ದ ಭರ್ಜರಿ ಗೆಲುವು ದಾಖಲಿಸುವ ಮೂಲಕ 2-1 ಅಂತರದಲ್ಲಿ ಭಾರತ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳುವ ಮೂಲಕ ಟೆಸ್ಟ್ ಸರಣಿ ಸೋಲಿ ನ ಸೇಡನ್ನು ತೀರಿಸಿಕೊಂಡಿದೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಪಡೆಯ ಬೌಲಿಂಗ್ ಅಬ್ಬರದ ಎದುರು ಹರಿಣಗಳ ಪಡೆ ಪೆವಿಲಿಯನ್ ಪರೇಡ್‌ಗೆ ಮೊರೆ ಹೋಗಿತ್ತು. ಮೊದಲ ಓವರ್‌ನಲ್ಲೇ ಒಂದು ವಿಕೆಟ್ ಕಳೆದುಕೊಂಡು, ಆ ನಂತರ ಒಂದಿಷ್ಟು ಚೇತರಿಕೆ ಕಂಡರೂ ಮತ್ತೆ ಸಾಲು ಸಾಲು ವಿಕೆಟ್ ಉರುಳಿದ ಪರಿಣಾಮವಾಗಿ ದಕ್ಷಿಣ ಆಫ್ರಿಕಾ ತಂಡ ನಲುಗಿ ಹೋಗಿತ್ತು.
ಹೌದು, ದೊಡ್ಡ ದೊಡ್ಡ ಸ್ಟಾರ್ ಬ್ಯಾಟರ್ಸ್ ಇದ್ದರೂ ಇವತ್ತು ದಕ್ಷಿಣ ಆಫ್ರಿಕಾ ತಂಡ ಪರದಾಡಿ ಹೋಗಿತ್ತು. ನಿಗದಿತ 50 ಓವರ್‌ಗಳ ಪೈಕಿ ಕೇವಲ 47.5 ಓವರ್ ಆಡಿದ ದಕ್ಷಿಣ ಆಫ್ರಿಕಾ ತಂಡ 270 ರನ್‌ಗೆ ಆಲೌಟ್ ಆಗಿ ಪೆವಿಲಿಯನ್ ಸೇರಿತು. ದಕ್ಷಿಣ ಆಫ್ರಿಕಾ ತಂಡದ ಪರವಾಗಿ ಡಿಕಾಕ್ 106 ರನ್ ಹಾಗೂ ಟೆಂಬಾ ಬವುಮಾ 48 ರನ್ ಗಳಿಸಿದ್ದು ಬಿಟ್ಟರೆ ಉಳಿದವರು ರನ್ ಕಲೆ ಹಾಕಲು ಮುಂದಾಗಲಿಲ್ಲ. ಈ ಮೂಲಕ ಭಾರತದ ಪರವಾಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ 4 ವಿಕೆಟ್ ಹಾಗೂ ಕುಲ್ದೀಪ್ ಯಾದವ್ 4 ವಿಕೆಟ್ ಪಡೆದು ಮಿಂಚಿದರು.
ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕರಾಗಿ ಬ್ಯಾಟಿಂಗ್ ಗೆ ಇಳಿದ ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮ ಅವರು ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಭಾರತಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲನೇ ವಿಕೆಟ್ ಗೆ 155 ರನ್ ಗಳ ಜತೆಯಾಟ ನೀಡಿದ ರೋಹಿತ್ ಶರ್ಮ ಅವರು 75 ರನ್ ಗಳಿಸಿ ಆಡುತ್ತಿದ್ದ ವೇಳೆ ದಕ್ಷಿಣ ಆಪ್ರಿಕಾದ ಬೌಲರ್ ಕೇಶವ್ ಮಹಾರಾಜ್ ಅವರ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ಬ್ಯಾಟಿಂಗ್ ಗೆ ಆಗಮಿಸಿದ ವಿರಾಟ್ ಕೊಹ್ಲಿ 45 ಎಸೆತಗಳಲ್ಲಿ 65
ರನ್ 6 ಬೌಂಡರಿ, 3 ಸಿಕ್ಸ್ ಭಾರಿಸುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು. ಇದಕ್ಕೂ ಮೊದಲು ಯಶಸ್ವಿ ಜೈಸ್ವಾಲ್ ಅವರು 121 ಎಸೆತಗಳಲ್ಲಿ 116 ರನ್ 16 ಬೌಂಡರಿ 2 ಸಿಕ್ಸ್ ಭಾರಿಸುವ ಮೂಲಕ ಮೊದಲನೇ ಅಂತರಾಷ್ಟ್ರೀಯ ಶತಕವನ್ನು ದಾಖಲಿಸಿದರು.
