ಶಿಡ್ಲಘಟ್ಟ : ದೇಶದಲ್ಲಿ ಕೃಷಿ ಕ್ಷೇತ್ರ ಗಂಡಾಂತರದಲ್ಲಿದ್ದು, ಕೃಷಿಕರು ದಿಕ್ಕು ತಪ್ಪುತ್ತಿ ದ್ದಾರೆ, ಅನ್ನದಾತ ಸಾಯಲು ಶರಣಾಗುತ್ತಿದ್ದರೂ ಅನ್ನದಾತರ ಬಗ್ಗೆ ಯಾರು ಗಮನಹರಿಸುತ್ತಿಲ್ಲ ಎಂದು ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಮತ್ತು ಕೃಷಿಕ ಸಮಾಜದ ಅಧ್ಯಕ್ಷ ಮಳ್ಳೂರು ಶಿವಣ್ಣ ತಿಳಿಸಿದರು.
ತಾಲೂಕಿನ ವರದನಾಯಕನಹಳ್ಳಿ ಗ್ರಾಮದಲ್ಲಿ ಕೃಷಿನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜ, ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ನಡೆದ 2025-26 ನೇ ಸಾಲಿನ ರಾಷ್ಟ್ರೀಯ ರೈತರ ದಿನಾಚರಣೆ ಮತ್ತು ಆತ್ಮ ಯೋಜನೆಯಯಡಿ ಕಿಸಾನ್ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸರ್ಕಾರಗಳು ಅನ್ನದಾತರಿಗೆ ಗೌರವ ಕೊಡುತ್ತಿಲ್ಲ, ಅನ್ನದಾತರ ಹೆಸರಲ್ಲಿ ರಾಜಕಾರಣ ಮಾಡುತ್ತಿದ್ದಾರೆ, ಅನ್ನದಾತ ಮೃತಪಟ್ಟರೆ ಮನುಷ್ಯನ ಬದುಕು ಅಂತ್ಯವಾಗುತ್ತದೆ. ಜಗತ್ತಿನಲ್ಲಿ ಜೀವ ಸಂಕುಲ ಉಳಿದು ಬದುಕುತ್ತಿದೆ ಎಂದರೆ ಅದಕ್ಕೆ ಭೂಮಿ ಮತ್ತು ಅನ್ನ ಕಾರಣ, ಅದರಲ್ಲೂ ರೈತರಿಗೆ ಭೂಮಿ ಇಲ್ಲ ಅಂದರೆ ಅನ್ನ ಬೆಳೆಯಲು ಸಾಧ್ಯವಿಲ್ಲ ಎಂದರು.
ವಿಜ್ಞಾನಿ ತನ್ವೀರ್ ಅಹಮ್ಮದ್ ಮಾತನಾಡಿ, ರೈತರು ಸಾವಯವ ಕೃಷಿ ಬಗ್ಗೆ ಭಾವನಾತ್ಮಕವಾಗಿ ತೊಡಗಿಸಿಕೊಳ್ಳುವುದರ ಜತೆಗೆ ಸುಸ್ಥಿರವಾಗಿ ದೀರ್ಘಕಾಲದವರೆಗೆ ಲಾಭದಾಯಕ ಬೆಳೆಯನ್ನು ಬೆಳೆಯಬಹುದು. ಸಾವಯವ ಬೆಳೆ ಬೆಳೆಯಲು ಅನುಸರಿಸಬೇಕಾದ ಬೇಸಾಯ ಪದ್ಧತಿ, ವಿವಿಧ ಸಾವಯವ ಗೊಬ್ಬರ ಉತ್ಪಾದನೆ ಮತ್ತು ಬಳಕೆ, ಸುಧಾರಿತ ಕಾಂಪೋಸ್ಟ್ ಮತ್ತು ಎರೆಗೊಬ್ಬರ ತಯಾರಿಕೆ, ದ್ರವರೂಪದ ಗೊಬ್ಬರಗಳಾದ ಜೀವಸಾರ ಘಟಕ, ಜೀವಾಮೃತ, ಬೀಜಾಮೃತ ತಯಾರಿಕೆ ಬಗ್ಗೆ ಅವರು ವಿವರ ನೀಡಿದರು.
ಸಾವಯವ ಕೃಷಿ ಮಾಡುವ ಮೊದಲು ಬೆಳೆಗಳಿಗೆ ಬೇಕಾದ ಪೋಷಕಾಂಶಗಳನ್ನು ವೈಜ್ಞಾನಿಕವಾಗಿ ತಯಾರಿಸಿ ಅವುಗಳಿಗೆ ಅವಶ್ಯಕತೆಯಿರುವ ಪ್ರಮಾಣದಲ್ಲಿ ಕೊಡುವ ಕಡೆಗೆ ಗಮನಹರಿಸಬೇಕು. ಸಾವಯವ ಆಹಾರ ಪದಾರ್ಥಗಳಿಗೆ ಸಾವಯವ ದೃಢೀಕರಣ ಮಾಡಿಸಿ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಕೃಷಿ ಸಹಾಯಕ ನಿರ್ದೇಶಕ ಪಿ.ರವಿ ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಹಾಗೂ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ, ಕೃಷಿಕ ಸಮಾಜದ ಉಪಾಧ್ಯಕ್ಷ ರೆಡ್ಡಿಸ್ವಾಮಿ,ಪಾಪಣ್ಣ, ಕೆಂಪೇಗೌಡ, ರೈತ ಸಂಘದ ರಾಜ್ಯಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಪ್ರತೀಶ್, ಬಿ.ಮುನಿಕೆಂಪಣ್ಣ, ಟಿ.ಕೆ.ಅರುಣ್ ಕುಮಾರ್, ಚೀಮನಹಳ್ಳಿ ಬೈರೇಗೌಡ, ಜಿ.ಆರ್.ರಾಜಣ್ಣ, ಮಂಜುನಾಥ್ ಬಾಬು ಹಾಗಯ ರೈತಬಾಂದವರು ಪಾಲ್ಗೊಂಡಿದ್ದರು.
Trending
- ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು ; ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಅವಾಚ್ಯ ಶಬ್ದ ಬಳಸಿ ಧಮಕಿ
- ಚಿಕ್ಕಬಳ್ಳಾಪುರದ ಎಯು ಜ್ಯುವೆಲರ್ಸ್ ಕಳ್ಳತನ ಪ್ರಕರಣ ಆರೋಪಿಗಳ ಬಂಧನ, 21 ಕೆಜಿ ಬೆಳ್ಳಿ ವಶ
- ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವೆ : ಶಾಸಕ ಬಿ.ಎನ್.ರವಿಕುಮಾರ್
- ಚಿಮುಲ್ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ : ಕಾಂಗ್ರೆಸ್ ಮುಖಂಡ ರಾಜೀವ್‍ಗೌಡ ಹಾಗು ಆಂಜಿನಪ್ಪ (ಪುಟ್ಟು)
- ಕಲ್ಯಾಣಿ ತ್ಯಾಜ್ಯವನ್ನು ತೆರವುಗೊಳಿಸಲು ನಾಗರೀಕರ ಒತ್ತಾಯ
- ಪಂಚಾಯಿತಿಗೊಂದು ಗುಣಮಟ್ಟದ ಶಾಲೆ ನಿರ್ಮಾಣಕ್ಕೆ ಆದ್ಯತೆ
- ಸ್ವಾಮೀಜಿ ಮೇಲೆ ಹಲ್ಲೆ, ಗಾಯಗೊಂಡ ಸ್ವಾಮೀಜಿ ಆಸ್ಪತ್ರೆಗೆ ದಾಖಲು
