Subscribe to Updates
Get the latest creative news from FooBar about art, design and business.
- ಕಲ್ಟ್ ಸಿನಿಮಾ ಫ್ಲೆಕ್ಸ್ ತೆರವು ; ಪೌರಾಯುಕ್ತೆಗೆ ಕಾಂಗ್ರೆಸ್ ಮುಖಂಡ ಅವಾಚ್ಯ ಶಬ್ದ ಬಳಸಿ ಧಮಕಿ
- ಚಿಕ್ಕಬಳ್ಳಾಪುರದ ಎಯು ಜ್ಯುವೆಲರ್ಸ್ ಕಳ್ಳತನ ಪ್ರಕರಣ ಆರೋಪಿಗಳ ಬಂಧನ, 21 ಕೆಜಿ ಬೆಳ್ಳಿ ವಶ
- ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವೆ : ಶಾಸಕ ಬಿ.ಎನ್.ರವಿಕುಮಾರ್
- ಚಿಮುಲ್ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲಿದ್ದಾರೆ : ಕಾಂಗ್ರೆಸ್ ಮುಖಂಡ ರಾಜೀವ್ಗೌಡ ಹಾಗು ಆಂಜಿನಪ್ಪ (ಪುಟ್ಟು)
- ಕಲ್ಯಾಣಿ ತ್ಯಾಜ್ಯವನ್ನು ತೆರವುಗೊಳಿಸಲು ನಾಗರೀಕರ ಒತ್ತಾಯ
- ಪಂಚಾಯಿತಿಗೊಂದು ಗುಣಮಟ್ಟದ ಶಾಲೆ ನಿರ್ಮಾಣಕ್ಕೆ ಆದ್ಯತೆ
- ಸ್ವಾಮೀಜಿ ಮೇಲೆ ಹಲ್ಲೆ, ಗಾಯಗೊಂಡ ಸ್ವಾಮೀಜಿ ಆಸ್ಪತ್ರೆಗೆ ದಾಖಲು
Author: Janasaakshi
ಚಿಕ್ಕಬಳ್ಳಾಪುರ : ಅತಿಥಿ ಉಪನ್ಯಾಸಕರ ಹಿತ ಕಾಯುವ ದೃಷ್ಟಿಯಿಂದ ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ವಿಶೇಷ ಕಾಯಿದೆಯನ್ನು ರೂಪಿಸಿ ಅತಿಥಿ ಉಪನ್ಯಾಸಕರ ಬಾಳಿಗೆ ಬೆಳಕಾಗಬೇಕು ಎಂದು ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಮುನಿರಾಜು ಆಗ್ರಹಿಸಿದರು. ನಗರದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಮಾನವ ಸರಪಳಿ ನಿರ್ಮಿಸಿ ಸರ್ಕಾರವನ್ನು ಒತ್ತಾಯಿಸಿ ಹಕ್ಕುಗಳನ್ನು ಈಡೇರಿಸಬೇಕೆಂದು ಘೋಷಣೆಗಳನ್ನು ಕೂಗಿದರು. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಜಾಥಾ ನಡೆಸಿದ ಅತಿಥಿ ಉಪನ್ಯಾಸಕರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಮುನಿರಾಜು ಮಾತನಾಡಿ, ಕಾಲೇಜು ಶಿಕ್ಷಣ ಇಲಾಖೆ 2025 -26ನೇ ಶೈಕ್ಷಣಿಕ ಶಾಲೆಗೆ ಸಂಬಂಧಪಟ್ಟಂತೆ ಅತಿಥಿ ಉಪನ್ಯಾಸಕರ ನೇಮಕಾತಿ ಯನ್ನು ಯುಜಿಸಿ ನಿಯಮಾವಳಿಯಂತೆ ಮಾಡುತ್ತಿರುವುದು ಸರಿಯಲ್ಲ. ಹೀಗಾದಲ್ಲಿ 6904 ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ಬೀದಿಗೆ ಬೀಳುವಂತಾಗುತ್ತದೆ. ಹೀಗಾಗಿ ಕೂಡಲೇ ಕಾಲೇಜಿ ಶಿಕ್ಷಣ ಇಲಾಖೆ ಈ ಪ್ರಕ್ರಿಯೆಯನ್ನು ಕೈಬಿಡಬೇಕೆಂದು ಒತ್ತಾಯಿಸಿದರು. ಅತಿಥಿ ಉಪನ್ಯಾಸಕರ ಆಯ್ಕೆ ಎಂಬ ಪ್ರಕ್ರಿಯೆ 2004-05…
ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ತಾಲೂಕಿನ ಕಳವಾರ ಗ್ರಾಮದಲ್ಲಿ ಎರಡು ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಜಮೀನಿನಲ್ಲಿ ರಾತ್ರೋ ರಾತ್ರಿ ಎಗ್ಗಿಲ್ಲದೇ ಮಣ್ಣು ದಂಧೆ ನಡೆಯುತ್ತಿದೆ. ಜೆಸಿಬಿ ಯಂತ್ರಗಳ ನೆರವಿನಿಂದ ನೂರಾರು ಟಿಪ್ಪರ್ ಲೋಡ್ ಮಣ್ಣು ಖಾಸಗಿ ವ್ಯಕ್ತಿಗಳು ಸಾಗಿಸುತ್ತಿದ್ದರೂ ಟ್ರಸ್ಟ್ ಪದಾಧಿಕಾರಿಗಳು, ಭಕ್ತರಿಂದ ತಡೆಯಲು ಸಾಧ್ಯವಾಗುತ್ತಿಲ್ಲ. ಮಠಕ್ಕೆ ಸೇರಿದ ಜಮೀನಿನಲ್ಲಿ ಮಣ್ಣು ಬಗೆದ ಪರಿಣಾಮ ಹಳ್ಳಕೊಳ್ಳಗಳು ನಿರ್ಮಾಣವಾಗಿದೆ. ಮಠದಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲ ವ್ಯಕ್ತಿಗಳು ಈ ದಂಧೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ರಾಜದಾನಿಗೆ ಸಮೀಪವಿರುವ ಟ್ರಕ್ಕಿಂಗ್ ಸ್ಫಾಟ್ ಎಂದೇ ಖ್ಯಾತಿಗಳಿಸಿರುವ ಸ್ಕಂದಗಿರಿ ಬೆಟ್ಟದ ಬುಡದಲ್ಲಿ ಕಾಲಜ್ಞಾನಿ ಶ್ರೀವೀರಬ್ರಹ್ಮೇಂದ್ರ ಸ್ವಾಮಿ ಅವರು ಬಾಲ್ಯದ ಜೀವನ ಕಳೆದ ಸ್ಥಳ ಪಾಪಾಘ್ನಿ ಮಠ ಹಾಗೂ ಒಂಕಾರ ಜ್ಯೋತಿ ಮಠ ಟ್ರಸ್ಟ್ ಇದ್ದು. ಇಲ್ಲಿಗೆ ಪ್ರತಿ ವರ್ಷ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ಇದೇ ಪಾಪಾಘ್ನಿ ಮಠ ಹಾಗೂ ಒಂಕಾರ ಮಠ ಟ್ರಸ್ಟ್ಗೆ ಸೇರಿದ ಸುಮಾರು ಎರಡು ಎಕರೆ…
ಶ್ರೀನಿವಾಸಪುರ: ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಮಂಗಳವಾರ ಶ್ರೀನಿವಾಸಪುರ ತಾಲೂಕಿನ ೪ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕಡತಗಳನ್ನು ಪರಿಶೀಲನೆ ನಡೆಸಿದರು. ಕಡತಗಳಲ್ಲಿ ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಶ್ರೀನಿವಾಸಪುರ ತಾಲೂಕಿನ ಜೆ.ತಿಮ್ಮಸಂದ್ರ, ಆರಿಕುಂಟೆ, ದಳಸನೂರು ಹಾಗೂ ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಮತ್ತು ಅವರ ತಂಡವು ಭೇಟಿ ನೀಡಿ ಸರ್ಕಾರದ ಪ್ರಮುಖ ಯೋಜನೆಗಳಾದ ನರೇಗಾ ಅನುಷ್ಠಾನ, ಕುಡಿಯುವ ನೀರು ಯೋಜನೆಗಳ ಪ್ರಗತಿ, ನೈರ್ಮಲ್ಯ ನಿರ್ವಹಣೆ ಮತ್ತು ಕಂದಾಯ ವಸೂಲಾತಿಗಳಿಗೆ ಸಂಬAಧಿಸಿದAತೆ ಕಡತಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು. ಕಡತಗಳ ಪರಿಶೀಲನೆ ವೇಳೆ ಆಡಳಿತ ನಿರ್ವಹಣೆಯಲ್ಲಿನ ಹಲವು ಗಂಭೀರ ಲೋಪದೋಷಗಳು ಬೆಳಕಿಗೆ ಬಂದವು. ಮುಖ್ಯವಾಗಿ ಕೆಲ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮತ್ತು ಕಡತ ನಿರ್ವಹಣೆಯಲ್ಲಿನ ನಿರ್ಲಕ್ಷö್ಯದ ಬಗ್ಗೆ ಉಪ ಲೋಕಾಯುಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಸಾರ್ವಜನಿಕರ ಹಣ ಸದ್ಬಳಕೆ…
ಚಿಕ್ಕಬಳ್ಳಾಪುರ: ನಗರ ಹೊರ ವಲಯದ ಸುಲಾಲಪ್ಪ ದಿನ್ನೆಯಲ್ಲಿರುವ ಶ್ರೀ ಆದಿ ಚುಂಚನಗಿರಿಶಾಖಾ ಮಠದ ಆವರಣದಲ್ಲಿರುವ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಮಂಗಳವಾರ ಬೆಳಗ್ಗೆ ಹನುಮ ಜಯಂತಿ ಪ್ರಯುಕ್ತ ಶ್ರಿ ವೀರಾಂಜನೇಯ ಸ್ವಾಮಿಗೆ ಹೋಮ ಹವನ, ಅಭಿಷೇಕ, ಭಕ್ತಿ ಗೀತೆಗಳ ಗಾಯನ ಹಾಗೂ ವಿಶೇಷ ಪೂಜೆ ನಡೆಸುವ ಮೂಲಕ ಮಹಾ ಸಂಸ್ಥಾನ ಮಠದ ಪೀಠಾದ್ಯಕ್ಷ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಏಳು ದಿನಗಳ ವಿಶೇಷ ಹನುಮ ಜಯಂತಿಗೆ ಚಾಲನೆ ನೀಡಿದರು. ಚಿಕ್ಕಬಳ್ಳಾಪುರ ಹೊರ ವಲಯದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ವಹಣೆಯಲ್ಲಿ ನಡೆಯುತ್ತಿರುವ ಶ್ರೀ ವೀರಾಂಜುನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜೆ, ಹೋಮ ಹವನ, ಅಭಿಷೇಕ ನಡೆಯಿತು. ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದ ನಾಥ ಸ್ವಾಮೀಜಿ ಅವರು ದೇವರಿಗೆ ಸ್ವತಃ ತಾವೇ ಪೂಜಾ ವಿಧಿ ವಿಧಾನಗಳನ್ನು ಕೈಗೊಂಡು ಭಕ್ತಿ ಗೀತೆಗಳ ಗಾಯನ ನಡೆಸಿಕೊಟ್ಟರು. ಶ್ರೀಮಠದ ಸದ್ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ನೆರೆದಿದ್ದ ಭಕ್ತರಿಗೆ ಶ್ರೀಗಳು ಪ್ರಸಾದ ವಿತರಿಸಿ…
ಚಿಕ್ಕಬಳ್ಳಾಪುರ : ಎಚ್ ಐ ವಿ ಸೋಂಕು ಹಾಗೂ ಏಡ್ಸ್ ಕಾಯಿಲೆಯನ್ನು ತಡೆಗಟ್ಟಲು ಜನಸಾಮಾನ್ಯರಲ್ಲಿ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಟಿ.ಪಿ ಪಿ.ರಾಮಲಿಂಗೇಗೌಡ ತಿಳಿಸಿದರು. ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೋಲೀಸ್ ಇಲಾಖೆ, ನಂದಿ ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ ಹಾಗೂ ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕ, ಜಿಲ್ಲಾ ಕ್ಷಯರೋಗ ನರ‍್ಮೂಲನಾ ಕೇಂದ್ರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೆಡ್ ರಿಬ್ಬನ್ ಕ್ಲಬ್, ಸ್ವಯಂ ಸೇವಾ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಅಂಬೇಡ್ಕರ್ ಭವನದಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಆರೋಗ್ಯವೇ ಭಾಗ್ಯ ಎಂದು ಕರೆಯಲಾಗುತ್ತದೆ,ಏಕೆಂದರೆ ಆರೋಗ್ಯವಿದ್ದರೆ ಏನನ್ನಾದರೂ ಸಾಧಿಸಬಹುದು. ಆರೋಗ್ಯವಿಲ್ಲದಿದ್ದರೆ ಏನೇ ಸಾಧಿಸಿದರು ಪ್ರಯೋಜನವಿಲ್ಲ ಅದ್ದರಿಂದ ಸಮಾಜದಲ್ಲಿ…
ವಿಜಯಪುರ (ಓಂಕಾರೇಶ್ವರ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವದೇವನಹಳ್ಳಿ): ಪಟ್ಟಣದ ಗುರುಪ್ಪನಮಠದ ಓಂಕಾರೇಶ್ವರ ವೃತ್ತದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವ ಕರ‍್ಯಕ್ರಮವನ್ನು ಆಯೋಜಿಸಲಾಗಿತ್ತು. ತಾಯಿ ಭುವನೇಶ್ವರಿ ಮತ್ತು ಓಂಕಾರೇಶ್ವರಸ್ವಾಮಿ ದೇವರ ಭಾವಚಿತ್ರಕ್ಕೆ ಹಾಗೂ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಬಳಿಕ ಕನ್ನಡ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಸರ‍್ವಜನಿಕರಿಗೆ ಅನ್ನಸಂರ‍್ಪಣೆ ನಡೆಯಿತು. ಕನ್ನಡ ರಾಜ್ಯೋತ್ಸವವು ಕೇವಲ ಒಂದು ದಿನ ಆಚರಣೆಗಷ್ಟೇ ಸೀಮಿತವಾಗಬಾರದು. ಕನ್ನಡ ನಾಡು, ನುಡಿ, ಕಲೆ ಹಾಗೂ ಸಂಸ್ಕೃತಿಗೆ ಕೊಡುಗೆ ನೀಡಿದವರನ್ನು ಸ್ಮರಿಸುವ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದು ಪುರಸಭೆ ಸದಸ್ಯ ಬೈರೇಗೌಡ ತಿಳಿಸಿದರು. ಕನ್ನಡ ಭಾಷೆ ನಮ್ಮೆಲ್ಲರ ಹೆಮ್ಮೆ. ಪ್ರತಿಯೊಬ್ಬರು ಮಾತೃಭಾಷೆ ಕನ್ನಡ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ನಮ್ಮ ಸಾಹಿತ್ಯ, ಕಲೆ, ಪರಂಪರೆಯನ್ನು ಮುಂದಿನ ತಲೆಮಾರಿಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಶ್ರೀನೀಲಗಿರೀಶ್ವರ ವಿದ್ಯಾನಿಕೇತನ ಟ್ರಸ್ಟ್ ಅಧ್ಯಕ್ಷ ವೀರಣ್ಣ ಹೇಳಿದರು. ಈ ಸಂರ‍್ಭದಲ್ಲಿ ಪುರಸಭೆ ಸದಸ್ಯರಾದ ನಾರಾಯಣಸ್ವಾಮಿ, ರವಿ, ಓಂಕಾರೇಶ್ವರ ಟ್ರಸ್ಟ್ ಅಧ್ಯಕ್ಷ ವಿ.ಎಂ.ನಾಗರಾಜ್, ರಾಮಚಂದ್ರಪ್ಪ, ರಮೇಶ್, ಮಹೇಶ್, ಮಂಜುನಾಥ್, ನವೀನ್, ಅನಿಲ್,…
ವಿಜಯಪುರ (ದೇವನಹಳ್ಳಿ): ವಿಜಯಪುರ ಟೌನ್ ಒಕ್ಕಲಿಗರ ಸಂಘಕ್ಕೆ ಪ್ರಥಮ ಬಾರಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಇದಕ್ಕೂ ಮುನ್ನ ಎಲ್ಲ ಪದಾಧಿಕಾರಿಗಳು ಪಟ್ಟಣದ ಗುರುಪ್ಪನಮಠದ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಸಂಘದ ನೂತನ ಅಧ್ಯಕ್ಷರಾಗಿ ಪುರಸಭೆ ಸದಸ್ಯ ಎಂ.ಬೈರೇಗೌಡ, ಉಪಾಧ್ಯಕ್ಷರಾಗಿ ವಿ.ಮಂಜುನಾಥ್, ಪ್ರಭಾಕಾರ್, ಸಿ.ಮುನಿಕೃಷ್ಣ, ರಾಜ್‍ಕುಮಾರ್, ಪ್ರಧಾನಕರ‍್ಯರ‍್ಶಿ ಎಂ.ಮಹೇಶ್, ಕರ‍್ಯರ‍್ಶಿ ನವೀನ್‍ಕುಮಾರ್, ಸಂಘಟನಾ ಕರ‍್ಯರ‍್ಶಿಯಾಗಿ ಮೋಹನ್ ಕುಮಾರ್, ಡಿ.ರಘು, ಜಿ.ಲೋಕೇಶ್, ಸುದೇಶ್ ಕುಮಾರ್, ಸಹ ಕರ‍್ಯರ‍್ಶಿಗಳಾಗಿ ನಿತೇಶ್, ಮಧು, ಮಂಜುನಾಥ್, ರಮೇಶ್, ಜೀವನ್, ಅನಿಲ್, ಮಧುಸೂದನ್, ಖಜಾಂಚಿ ವಿ.ರವಿ, ಸದಸ್ಯರಾಗಿ ಎಸ್.ರಾಜಯ್ಯ, ಡಿ.ಎನ್.ಸುರೇಶ್ ಅವರನ್ನು ನೇಮಕ ಮಾಡಲಾಗಿದೆ.
ಚಿಕ್ಕಬಳ್ಳಾಪುರ: ಕೊಯಮತ್ತೂರಿನಲ್ಲಿರುವ ಇಶಾ ಯೋಗ ಕೇಂದ್ರದಲ್ಲಿ ಸೋಮವಾರ ಡಿಸೆಂಬರ್ ೧ ರಂದು ಬೆಳಗ್ಗೆ ನಡೆದ ಖಾಸಗಿ ಸಮಾರಂಭದಲ್ಲಿ ಬಹುಭಾಷ ನಟಿ ಸಮಂತಾ ರುತ್ ಪ್ರಭು ಅವರು ಚಲನಚಿತ್ರ ನಿರ್ದೇಶಕ , ನಿರ್ಮಾಪಕ ರಾಜ್ ನಿಡಿಮೋರ್ ಅವರನ್ನು ವಿವಾಹವಾಗಿದ್ದಾರೆ. ವಿವಾಹ ಕಾರ್ಯಕ್ರಮದ ಚಿತ್ರಗಳನ್ನು ನಟಿ ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊAಡಿದ್ದಾರೆ. ಇಶಾ ಕೇಂದ್ರದ ಒಳಗೆ ಲಿಂಗ ಬೈರವಿ ದೇವಾಲಯದಲ್ಲಿ ನಡೆದ ಈ ವಿವಾಹದಲ್ಲಿ ಅಪ್ತ ಸ್ನೇಹಿತರು ಮತ್ತು ಕುಟುಂಬ ವರ್ಗದವರು ಭಾಗವಹಿಸಿದ್ದರು. ೩೮ ಹರೆಯದ ಸಮಂತಾ ಕೆಂಪು ಸೀರೆ ಧರಿಸಿ ಕೂದಲನ್ನು ಅಚ್ಚುಕಟ್ಟಾಗಿ ಕಟ್ಟಿ, ವಜ್ರದ ಆಭರಣಗಳನ್ನು ಅಲಂಕರಿಸಿಕೊAಡು ಕಂಗೊಳಿಸಿದ್ದು, ರಾಜ್ ನಿಧಿಮೋರು ಬಿಳಿ ಕುರ್ತಾ, ಪೈಜಾಮ ಮತ್ತು ಕ್ರೀಮ್ ಬಂಧ್‌ಗಲಾ ಧರಿಸಿದ್ದರು. ಇಬ್ಬರು ಲಿಂಗ ಬೈರವಿ ದೇವಿಯ ಅವಾಸಸ್ಥಾನದಲ್ಲಿ ಭೂತ ಶುದ್ದಿ ವಿವಾಹ ಸಮಾರಂಭವನ್ನು ನಡೆಸಿದ್ದು, ಲಿಂಗ ಭೈರವಿ ನಿವಾಸಗಳಲ್ಲಿ ಅಥವಾ ಆಯಾ ಸ್ಥಳಗಳಲ್ಲಿ ನೀಡಲಾಗುವ ಭೂತ ಶುದ್ದಿ ವಿವಾಹ ಪದ್ದತಿ ದಂಪತಿಗಳೊಳಗಿನ ಐದು ಅಂಶಗಳನ್ನು ಶುದ್ದಿಕರಿಸುತ್ತದೆ. ಶಾಸ್ತçದಲ್ಲಿ…
ವಿಶ್ವ ಪ್ರಸಿದ್ಧ ಭೋಗ ನಂದೀಶ್ವರ ಚಿಕ್ಕಬಳ್ಳಾಪುರ: ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಐತಿಹಾಸಿಕ ಭೋಗ ನಂದೀಶ್ವರ ದೇವಾಲಯ ಅದ್ಭುತವಾದ ವಾಸ್ತು ಶಿಲ್ಪ, ಇಲ್ಲಿ ನಡೆಯುವ ನಾನಾ ಧಾರ್ಮಿಕ ಕೈಕಂರ್ಯಗಳು ಪ್ರವಾಸಿಗರು, ಭಕ್ತಗಣವನ್ನು ಆಕರ್ಷಿಸುತ್ತಿದೆ. ವಿಶೇಷವಾಗಿ ನಂದಿ ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರು ಪುರಾತನ ಕಾಲದ ಈ ನಂದಿ ದೇಗುಲಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಭೋಗ ನಂದೀಶ್ವರ, ಅರುಣಾಚಲೇಶ್ವರ, ಈ ಎರಡು ಮಧ್ಯೆದ ಗುಡಿಯಲ್ಲಿ ಉಮಾಮಹೇಶ್ವರ, ಕಮಠೇಶ್ವರ, ಅಪಿತ ಕುಚಲಾಂಬದೇವಿ ಮತ್ತು ಗಿರಿಜಾ ಮಾತೆಯ ದರ್ಶನ ಪಡೆಯುತ್ತಾರೆ. ಕಿರು ಪರಿಚಯ: ಭೋಗ ನಂದೀಶ್ವರ ದೇವಾಲಯವೂ ಕ್ರಿ.ಶ 9 ರಿಂದ 15 ನೇ ಶತಮಾನದ ಒಂದು ಉತ್ತಮ ದ್ರಾವಿಡ ಶೈಲಿಯ ವಾಸ್ತು ಪ್ರಕಾರವಾಗಿದೆ. ನೊಳಂಬರ ಆಡಳಿತಗಾರ ನೋಳಂಬಂದಿರಾಜ ಮತ್ತು ರಾಷ್ಟ್ರಕೂಟ ದೊರೆ ಮೂರನೇ ಗೋವಿಂದ (ಕ್ರಿ.ಶ 806) ಜಯತೇಜ ಮತ್ತು ದತ್ತಿಯಾ (ಕ್ರಿ.ಶ 810) ನಂದಿಯಲ್ಲಿನ ಶಿವ ದೇವಸ್ಥಾನ ಕಟ್ಟಿಸಲು ಧನ ಸಹಾಯ ಮಾಡಿದ್ದರೆಂದು ಬಾಣ ಆಡಳಿತಗಾರನ, ತಾಮ್ರದ…