Author: Janasaakshi

ಚಿಕ್ಕಬಳ್ಳಾಪುರ : ಇಂದಿರಾ ಕಿಟ್ ಸೌಲಭ್ಯ ಮುಂದಿನ ಯುಗಾದಿ ಹಬ್ಬದ ವೇಳೆಗೆ ಜನರಿಗೆ ಸಿಗಲಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್. ರಮೇಶ್ ತಿಳಿಸಿದರು.  ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ “ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ”ಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಒಬ್ಬ ವ್ಯಕ್ತಿಗೆ 10 ಕೆ.ಜಿ. ಅಕ್ಕಿಯನ್ನು ಕೊಟ್ಟರೆ ಒಂದು ಕುಟುಂಬಕ್ಕೆ 30 ರಿಂದ 40 ಕೆ.ಜಿ. ಅಕ್ಕಿ ಮಾಸಿಕ ಸಿಗುವುದರಿಂದ ಅಷ್ಟು ಪ್ರಮಾಣದ ಅಕ್ಕಿಯನ್ನು ಜನರು ಸದುಪಯೋಗಪಡಿಸಿಕೊಳ್ಳುತ್ತಿಲ್ಲ, ಈ ಬಗ್ಗೆ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಗಮನಕ್ಕೆ ನಾನು ತಂದಿದ್ದೆ ಇದನ್ನು ಪರಿಗಣಿಸಿದ ಸಮಿತಿಯು ಈ ಮಾಹೆಯಿಂದ  ಇಂದಿರಾ ಕಿಟ್ ಸೌಲಭ್ಯ ಜನರಿಗೆ ನೀಡಲು ನಿರ್ಧಾರ ಮಾಡಲಾಗಿತ್ತು ,ಆದರೆ ಅನಿವಾರ್ಯ ಕಾರಣಗಳಿಂದ  ಬರುವ ಯುಗಾದಿಯಿಂದ  ಇಂದಿರಾ ಕಿಟ್ ನ್ನು ಸಾರ್ವಜನಿಕರಿಗೆ ವಿತರಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಸಮಿತಿಯು  ನಿರ್ಧರಿಸಿದೆ ಅದರಂತೆ…

Read More

ಶಿಡ್ಲಘಟ್ಟ : ಗಣತಿಯನ್ನು ಮಾಡುವುದರಿಂದ ಜಲಮೂಲಗಳ ಸಂರಕ್ಷಣೆ ಮತ್ತು ಭವಿಷ್ಯದ ನೀರಾವರಿ ಯೋಜನೆಗಳ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ತಹಶೀಲ್ದಾ‌ರ್ ಎನ್‌.ಗಗನಸಿಂಧು ತಿಳಿಸಿದರು. ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಕುಂಟೆಯ ಬಳಿ ಏಳನೇ ಸಣ್ಣ ನೀರಾವರಿ ಗಣತಿ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ನಿರ್ದೇಶನದಂತೆ ಏಳನೇ ಸಣ್ಣ ನೀರಾವರಿ ಗಣತಿಯನ್ನು ತಾಲ್ಲೂಕಿನಲ್ಲಿ ಮೊಬೈಲ್‌ ಆಪ್‌ ಮೂಲಕ ಹಮ್ಮಿಕೊಳ್ಳಲಾಗಿದ್ದು, ಅಧಿಕಾರಿಗಳು ನಿಖರವಾದ ಅಂಕಿ-ಅಂಶಗಳನ್ನು ಸಂಗ್ರಹಿಸಬೇಕು ಎಂದರು. ನೀರಿನ ಆಸರೆಗಳ ಸಮಗ್ರ ಅಂಕಿ-ಅಂಶ ಸಂಗ್ರಹಣೆಯಿಂದ ನೀರಿನ ಸದ್ಬಳಕೆ, ಅಂತರ್ಜಲ ಪ್ರಮಾಣದ ಅಂದಾಜು ಮತ್ತು ಹೊಸ ನೀತಿ ನಿರೂಪಣೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಮುಖ್ಯವಾಗಿ ಒತ್ತುವರಿಯಾಗಿರುವ ಕೆರೆ-ಕುಂಟೆಗಳನ್ನು ಗುರುತಿಸಿ, ಅವುಗಳನ್ನು ತೆರವುಗೊಳಿಸಲು ಈ ಗಣತಿ ಸಹಕಾರಿಯಾಗಲಿದೆ, ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದರು. ಈಗ ಮಾಡುತ್ತಿರುವ ಗಣತಿ ಕಾರ್ಯವು ಸಂಪೂರ್ಣ ಡಿಜಿಟಲ್ ಆಗಿದ್ದು, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಸ್ಥಳದಲ್ಲೇ ಮೊಬೈಲ್ ಆಪ್…

Read More

ಚಿಕ್ಕಬಳ್ಳಾಪುರ: ಗುಣಾತ್ಮಕ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿ ಮಕ್ಕಳನ್ನು ಬೌದ್ಧಿಕವಾಗಿ ಬಲಪಡಿಸಲು ಬುನಾದಿ ಆಧಾರಿತ ಕಲಿಕಾ ಹಬ್ಬ ಹೆಚ್ಚು ಸಹಾಯಕಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯಾ ಅಭಿಪ್ರಾಯಪಟ್ಟರು. ಅವರು ತಾಲ್ಲೂಕಿನ 19 ಕ್ಲಸ್ಟರ್ ನಲ್ಲಿ ಎಸ್ ಗೊಲ್ಲಹಳ್ಳಿ ಕ್ಲಸ್ಟರ್ ಕಲಿಕಾ ಹಬ್ಬ ಉದ್ಘಾಟನೆ ಮಾಡಿದ ನಂತರ ಮಾತನಾಡಿ, ಕನ್ನಡ ಭಾಷಾ ಮತ್ತು ಗಣಿತ ಬುನಾದಿ ಆಧಾರಿತ ಕಲಿಕಾ ಸಾಮರ್ಥ್ಯಗಳನ್ನು ಪ್ರೋತ್ಸಾಹ ಮಾಡುವ ವಿಧಾನದ ಕಾರ್ಯಕ್ರಮ ಆಗಿದೆ. ಇಂತಹ ಕಲಿಕಾ ಹಬ್ಬಗಳನ್ನು ತಾಲ್ಲೂಕಿನ 19 ಕ್ಲಸ್ಟರ್ ಗಳಿದ್ದು, ಪ್ರಥಮ ಕ್ಲಸ್ಟರ್ ಆಗಿ ಕಲಿಕಾ ಹಬ್ಬ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದಲ್ಲದೇ ಇದೇ ತಿಂಗಳಲ್ಲಿ ಎಲ್ಲಾ ಕ್ಲಸ್ಟರ್ಗಳಲ್ಲಿ ಕಲಿಕಾ ಹಬ್ಬ ಆಚರಣೆ ಮಾಡುತ್ತೇವೆ ಎಂದರು. ಕಲಿಕಾ ಹಬ್ಬದಲ್ಲಿ ನಡೆಯುವ ಒಟ್ಟು ಚಟುವಟಿಕೆ ಸ್ವರ್ಧೆಗಳಲ್ಲಿ ಪೋಷಕರು ಮತ್ತು ಮಕ್ಕಳ ಸಹ ಸಂಬಂಧ ಚಟುವಟಿಕೆ ಹಮ್ಮಿಕೊಂಡಿರುವುದು ಸಾಮಾಜಿಕ ಪರಿಸರದಲ್ಲಿ ಉತ್ತಮ ಬಾಂಧವ್ಯ ಬೆರೆಯುತ್ತದೆ ಎಂದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಸ್ವಾಮಿ ಮಾತನಾಡಿ, 1 ರಿಂದ…

Read More

ವಿಜಯಪುರ: ಜಿಲ್ಲಾಡಳಿತ ಭವನದ ಎದುರು ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಶ್ವಗುರು ಬಸವೇಶ್ವರರ ಕಂಚಿನ ಪ್ರತಿಮೆ ಅನಾವರಣಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಶ್ರೀಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆ ನಿರ್ಮಾಣ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜ್ ಅವರಿಗೆ ಮನವಿ ಸಲ್ಲಿಸಿದರು. ಶ್ರೀಜಗಜ್ಯೋತಿ ಬಸವೇಶ್ವರರ ಕಂಚಿನ ಪ್ರತಿಮೆ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷ ವಿ.ಮಂಜುನಾಥ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಸವೇಶ್ವರ ಪ್ರತಿಮೆಯನ್ನು ಜಿಲ್ಲಾಡಳಿತ ಭವನದ ಎದುರು 500 ಕೆ.ಜಿ ತೂಕದ 40 ಲಕ್ಷ ವೆಚ್ಚದಲ್ಲಿ ಕರಲಿಂಗ ಪೂಜೆ ಮಾಡುತ್ತಿರುವ ಶೈಲಿಯಲ್ಲಿ ಪ್ರತಿಮೆಯನ್ನು ಸ್ಥಾಪನೆ ಮಾಡಲು ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ. ಕಲ್ಲಿನ ಮಂಟಪದ ಕಂಬಗಳ ಮೇಲೆ ವಚನಗಳ ಬರಹಗಳು, ಶಿಲ್ಪಿಗಳ ಚಿತ್ರಗಳು ಇರಲಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರೊಂದಿಗೆ ನಡೆಸಿದ್ದ ಪೂರ್ವಭಾವಿ ಸಭೆಯಲ್ಲಿ, ತೀರ್ಮಾನಿಸಿರುವಂತೆ ಸಮಿತಿಯನ್ನು ರಚಿಸಿ, ಸಾಂಸ್ಕøತಿಕ ನಾಯಕನ ಪ್ರತಿಮೆ ಅನಾವರಣಗೊಳಿಸಲು ಸಿದ್ಧತೆ ನಡೆಯುತ್ತಿದ್ದು, ಈಗಾಗಲೇ ಪ್ರತಿಮೆಯನ್ನು ಅನಾವರಣಗೊಳಿಸಲು ಮಂಟಪ ಶೇ 80…

Read More

ಶಿಡ್ಲಘಟ್ಟ : ಪೊಲೀಸರು ದಂಡ ಹಾಕಿ ಕೇಸು ಹಾಕುತ್ತಾರೆ ಎಂದು ಭಯಪಟ್ಟು ಹೆಲ್ಮೆಟ್ ಧರಿಸುವ ಬದಲು ನಮ್ಮ ಪ್ರಾಣ ರಕ್ಷಣೆಗೆ ಹೆಲ್ಮೆಟ್ ಧರಿಸಬೇಕು ಹಾಗು ನಿಮ್ಮಅವಲಂಬಿತರ ಹಿತ ದೃಷ್ಟಿಯಿಂದ ಹೆಲ್ಮೆಟ್ ಧರಿಸಬೇಕು ಎಂದು ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಎಸ್.ಐ ಶ್ಯಾಮಲಾ ತಿಳಿಸಿದರು. ತಾಲ್ಲೂಕಿನ ದಿಬ್ಬೂರಹಳ್ಳಿಯಲ್ಲಿ ಹೆಲ್ಮೆಟ್ ಬಳಕೆ ಕುರಿತು ಜನ ಜಾಗೃತಿ ಮೂಡಿಸಿ ಅವರು ಮಾತನಾಡಿದರು. 18 ವರ್ಷಕ್ಕೆ ಮೇಲ್ಪಟ್ಟ ಬೈಕ್ ಚಲಾಯಿಸುವ ಎಲ್ಲರೂ ನಿಯಮದಂತೆ ವಾಹನ ಚಾಲನಾ ಪರವಾನಗಿ ಪಡೆದುಕೊಳ್ಳಬೇಕು, ಸಂಚಾರ ನಿಯಮಗಳನ್ನು ಸಂಪೂರ್ಣವಾಗಿ ತಿಳಿದುಕೊಂಡು ಪಾಲಿಸಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಬೈಕ್ ಓಡಿಸುವಾಗ ಮೊಬೈಲ್ ನಲ್ಲಿ ಮಾತನಾಡಿಕೊಂಡು ಹೋಗುವುದು ಸರ್ವೆ ಸಾಮಾನ್ಯವಾಗಿದೆ ,ಇದು ನಮಗೆ ನಾವೇ ಪ್ರಾಣಕ್ಕೆ ಸಂಚಕಾರ ತಂದುಕೊಂಡಂತೆ ಎಂದು ಆತಂಕ ವ್ಯಕ್ತಪಡಿಸಿದರು. ಮದ್ಯಪಾನ ಮಾಡಿ ಬೈಕ್ ಓಡಿಸುವುದು, ನಿಯಮ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುವುದು ಮಾಡದೆ ಎಲ್ಲರೂ ಸಂಚಾರಿ ನಿಯಮಗಳನ್ನು ಪಾಲಿಸಿ ತಾವು ಮತ್ತು ತಮ್ಮನ್ನು ನಂಬಿದವರ ಜೀವ ಕಾಪಾಡಿಕೊಳ್ಳಿ ಎಂದು…

Read More

ಶಿಡ್ಲಘಟ್ಟ : ಹೆಲ್ಮೆಟ್ ಧರಿಸುವುದು ಕೇವಲ ಕಾನೂನಿನ ಕಾರಣಕ್ಕಲ್ಲ ,ನಿಮ್ಮ ಅಮೂಲ್ಯ ಜೀವ ಉಳಿಸಿಕೊಳ್ಳಲು, ಅಪಘಾತದಲ್ಲಿ ಕೈಕಾಲಿಗೆ ಚಿಕಿತ್ಸೆ ಸಾಧ್ಯವಾದರೂ ತಲೆಗೆ ಗಾಯವಾದರೆ ಜೀವ ಉಳಿಯುವುದು ಕಷ್ಟ ಎಂದು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಮಹಮದ್ ರೋಷನ್ ಷಾ ಆತಂಕ ವ್ಯಕ್ತಪಡಿಸಿದರು. ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸ –ಜನವರಿ 2026ರ ಅಂಗವಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆ, 112 ಘಟಕ, ಚಿಂತಾಮಣಿ ಉಪವಿಭಾಗ, ಶಿಡ್ಲಘಟ್ಟ ವೃತ್ತ ಹಾಗೂ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆಯ ಸಹಯೋಗದಲ್ಲಿ ನಗರದ ನಗರ ಪೊಲೀಸ್ ಠಾಣೆ ಮುಂಭಾಗದಲ್ಲಿ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇತ್ತೀಚಿನ ದಿನಗಳಲ್ಲಿ ಬಹುತೇಕ ಮನೆಗಳಲ್ಲಿ ದ್ವಿಚಕ್ರ ವಾಹನಗಳಿವೆ ಆದರೆ ವಾಹನ ಚಾಲನೆಗೂ ಮುನ್ನ ಚಾಲನಾ ಪರವಾನಗಿ ಹಾಗೂ ಸುರಕ್ಷತಾ ಕ್ರಮಗಳು ಅತ್ಯಂತ ಅಗತ್ಯ ಎಂದು ಹೇಳಿದರು. ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದರೆ ದಂಡ ಹಾಗೂ ಕಠಿಣ ಕಾನೂನು ಕ್ರಮ ಎದುರಾಗಲಿದೆ ಎಂದು ಎಚ್ಚರಿಸಿದ ಅವರು,ಮೊದಲ ಬಾರಿ ದಂಡ, ಎರಡನೇ ಬಾರಿ…

Read More

ಬೆಂಗಳೂರು ಗ್ರಾಮಾಂತರ : ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕಲೆ, ಸಂಗೀತ, ನೃತ್ಯ ವಿವಿಧ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಉನ್ನತ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಗುರುತಿಕೊಳ್ಳಬೇಕು ಎಂದು ಸಂಸದ ಡಾ.ಕೆ. ಸುಧಾಕರ್  ತಿಳಿಸಿದರು.                                                                                                                                                           …

Read More

ವಿಜಯಪುರ (ದೇವನಹಳ್ಳಿ): ಇಲ್ಲಿನ ಮೇಲೂರು ರಸ್ತೆಯ ಮಾರ್ಗವಾಗಿ ಇರುವ ಪುರಾತನ ಕಾಲದ ನಾಗರಬಾವಿ ಕಲ್ಯಾಣಿಯನ್ನು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾ ಕಾರ್ಯ ಆರಂಭಗೊಂಡಿದೆ. ಓನೈನ್ ಟೆಕ್ನಾಲಜಿ ಇಂಡಿಯಾ, ಬ್ರೆವೋ ವೆಂಚರ್ಸ್ ಇಂಡಿಯಾ ಹಾಗೂ ಇಂಡಿಯಾ ಕೇರ್ಸ್ ಪೌಂಡೇಶನ್ ವತಿಯಿಂದ ನಾಗರಬಾವಿ ಕಲ್ಯಾಣಿಯ ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದ್ದು, ನಾಗರಬಾವಿಯ ಕಲ್ಯಾಣಿಗಳ ಮೆಟ್ಟಿಲು, ತಳದಲ್ಲಿ ಬೆಳೆದಿದ್ದ ಗಿಡಗಂಟಿಗಳ ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. `ಎನ್‍ಜಿಓ ಸಂಸ್ಥೆಗಳ ಸಹಯೋಗದಲ್ಲಿ ಕಲ್ಯಾಣಿ ಹಾಗೂ ಕುಂಟೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ವಿಜಯಪುರ ಪಟ್ಟಣದ ಸಮೀಪದ ನಲ್ಲೂರು ಕಲ್ಯಾಣಿ, ನಾಗರಬಾವಿ, ತದ ನಂತರ ಬಿಜ್ಜವಾರ ಕಲ್ಯಾಣಿಯನ್ನು ಮೊದಲ ಹಂತವಾಗಿ ಸ್ವಚ್ಛಗೊಳಿಸಿ ಅಭಿವೃದ್ಧಿ ಪಡಿಸಲಾಗುವುದು, 2 ನೇ ಹಂತವಾಗಿ ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ಮತ್ತೆ ಇದೇ ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಇಂಡಿಯಾ ಕೇರ್ಸ್ ಪೌಂಡೇಶನ್ ನ ಮಂಜುನಾಥ್ ತಿಳಿಸಿದರು. ನಾಗರಬಾವಿ ಕಲ್ಯಾಣಿ ಸ್ವಚ್ಛತೆ ಕಾರ್ಯ ನಡೆಯಿತು.

Read More

ಚಿಕ್ಕಬಳ್ಳಾಪುರ:  ಇಂದಿನಿಂದ ಏಪ್ರಿಲ್ ವರೆಗೆ 90 ದಿನಗಳ ಕಾಲ  ವಿಶೇಷ ಮಧ್ಯಸ್ಥಿಕೆ ಅಭಿಯಾನ 2.0ನ್ನು ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಮಲಿಂಗೇಗೌಡ ತಿಳಿಸಿದರು. ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ವಿಶೇಷ ಮಧ್ಯಸ್ಥಿಕೆ ಅಭಿಯಾನ 2.0  ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಜುಲೈ 1 ರಿಂದ ನವೆಂಬರ್ ವರೆಗೆ ಮಧ್ಯಸ್ಥಿಕೆ  ಅಭಿಯಾನ ನಡೆದಿತ್ತು. ಆಗ 2092 ಪ್ರಕರಣಗಳು ಮಧ್ಯಸ್ಥಿಕೆಗೆ ನೋಂದಣಿಯಾಗಿತ್ತು. ಈ ಪೈಕಿ 1069 ಪ್ರಕರಣಗಳನ್ನು ಮಧ್ಯಸ್ಥಿಕೆ ಅಭಿಯಾನ ಪ್ರಕ್ರಿಯೆಗೆ ಒಳಪಡಿಸಿ 190 ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿತ್ತು. ಈ ವರ್ಷದ ಆರಂಭದಲ್ಲೇ ಎರಡನೇ ಹಂತದ ಅಭಿಯಾನ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದನ್ನು ಸದುಪಯೋಗಪಡೆದುಕೊಳ್ಳಬೇಕು ಎಂದರು. ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯ ದ ನಿರ್ದೇಶನದಂತೆ  ಜನವರಿ 02 ರಿಂದ ಏಪ್ರಿಲ್ ವರೆಗೆ 90 ದಿನಗಳ ಕಾಲ   ಜಿಲ್ಲೆಯಲ್ಲಿಯೂ ವಿಶೇಷ ಮಧ್ಯಸ್ಥಿಕೆ 2.0 ಅಭಿಯಾನವನ್ನು ಹಮ್ಮಿಕೊಂಡು ಜಿಲ್ಲಾ ಮತ್ತು…

Read More

ಚಿಕ್ಕಬಳ್ಳಾಪುರ: ನಗರದ ಕೃಷ್ಣ ಟಾಕೀಸ್ ರಸ್ತೆಯಲ್ಲಿನ ಪ್ರಜಾಪಿತ ಬ್ರಹ್ಮ ಕುಮಾರಿಸ್ ಈಶ್ವರೀಯ ವಿಶ್ವವಿದ್ಯಾಲಯದ ಶಿವ ಪ್ರೇರಣಾ ಭವನದಲ್ಲಿ ಸರಳ ಹಾಗೂ ಶಾಂತಿಯುತವಾಗಿ ಹೊಸ ವರ್ಷಾಚರಣೆ ಮಾಡಲಾಯಿತು. ಸ್ಥಾನಿಕ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬಿ.ಕೆ.ಲಲಿತ ಅಕ್ಕ ಅವರು ಸರಳ ಧ್ಯಾನ ಮಾಡಿಸುವ ಮೂಲಕ ಭಗವಂತನ ನೆನಪಿನಲ್ಲಿ ಹೊಸ ವರ್ಷದಲ್ಲಿ ವರ್ಷ ವಿಡೀ ಶಾಂತಿ ನೆಮ್ಮದಿಯನ್ನು ಕಾಪಾಡಿಕೊಂಡು ನೆಮ್ಮದಿಯ ಜೀವನ ಕಂಡು ಕೊಳ್ಳಬೇಕೆಂದರು. ಬ್ರಹ್ಮಾಕುಮಾರಿಸ್ ನ ಈ ಕೇಂದ್ರದಲ್ಲಿ ಹೊಸ ವರ್ಷವನ್ನು ಗದ್ದಲದ ಪಾರ್ಟಿಗಳ ಬದಲು, ಆಧ್ಯಾತ್ಮಿಕತೆ ಮತ್ತು ಆತ್ಮ-ಪರಿವರ್ತನೆಯ ಮೇಲೆ ಗಮನ ಹರಿಸುತ್ತಾ ಹೊಸ ವರ್ಷದ ಆರಂಭವನ್ನು ಶಾಂತಿಯುತ ಧ್ಯಾನ, ಸಕಾರಾತ್ಮಕ ಸಂಕಲ್ಪಗಳೊಂದಿಗೆ ಆತ್ಮ-ಪರಿಷ್ಕರಣೆ ಮತ್ತು ದೈವಿಕ ಜ್ಞಾನದ ಮೂಲಕ ಆಚರಿಸಲಾಗುತ್ತದೆ ಇಂತಹ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಆತ್ಮದ ಪರಿಶುದ್ಧತೆ ಮಾಡಿಕೊಳ್ಳಬೇಕು ಎಂದರು. ಜನವರಿ 1 ರಂದು ಹೊಸ ಕ್ಯಾಲೆಂಡರ್ ವರ್ಷವನ್ನು ಸ್ವಾಗತಿಸುವ ಈ ಸಂದರ್ಭದಲ್ಲಿ ಬ್ರಹ್ಮಕುಮಾರಿಗಳು ತಮ್ಮ ಜೀವನದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲು ನಿರ್ಧರಿಸುತ್ತಾರೆ. ಹೊಸ ವರ್ಷದ ಮುನ್ನಾ ದಿನದ ರಾತ್ರಿ…

Read More